ಜೂ.28ರಿಂದ ಜೋಗ, ಕುಪ್ಪಳಿ ಪ್ರವಾಸಿಗರಿಗೆ ಮುಕ್ತ
ಶಿವಮೊಗ್ಗ, ಜೂ.27: ಕೊರೋನ ಲಾಕ್ ಡೌನ್ ಹಿನ್ನೆಲೆ ಜೋಗ ಸೇರಿದಂತೆ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಆದರೆ, ಜೂ.28ರಿಂದ ಎಲ್ಲ ತಾಣಗಳನ್ನು ತೆರೆಯಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಶಿವಮೊಗ್ಗ ಮೃಗಾಲಯ, ಆನೆ ಬಿಡಾರ ತೆರೆಯಲಾಗಿದ್ದು, ಈಗ ಜೋಗ ಮತ್ತು ಕುಪ್ಪಳಿಯನ್ನು ತೆರೆಯಲಾಗುತ್ತಿದೆ. ಆದರೆ, ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಅನ್ವಯ ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಕಾಪಾಡುವಂತೆ ಸೂಚನೆ ನೀಡಲಾಗಿದೆ.
Next Story





