ಕೊಡವೂರು ಮಸೀದಿ; ಸರಕಾರದ ನಿರ್ಧಾರ ಖಂಡನೀಯ : ಎಂ.ಪಿ.ಮೊಯಿದಿನಬ್ಬ
ಉಡುಪಿ, ಜೂ.27: ತಾಲೂಕಿನ ಕೊಡವೂರು ಗ್ರಾಮದ ಕಲ್ಮತ್ ಮಸೀದಿಗೆ ಈ ಹಿಂದೆ ಮಂಜೂರಾದ 0.67ಎಕ್ರೆ ಜಮೀನನ್ನು ಹಿಂಪಡೆದಿರುವ ರಾಜ್ಯ ಸರಕಾರದ ನಿರ್ಧಾರ ಖಂಡನೀಯ ಮತ್ತು ಇದು ಜಿಲ್ಲೆಯ ಸೌಹಾರ್ದತೆಯನ್ನು ಹಾಳುಗೆಡಹುವ ಯತ್ನ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಆರೋಪಿಸಿದ್ದಾರೆ.
ವಕ್ಫ್ ಮಂಡಳಿಯ ಅಭಿಪ್ರಾಯ ಕೇಳದೆ ಏಕಾಏಕಿ ರದ್ದುಗೊಳಿಸಿದ ಕ್ರಮ ವಕ್ಫ್ ಕಾಯ್ದೆಯ ಉಲ್ಲಂಘನೆಯಾಗಿದೆ. ರಾಜ್ಯ ವಕ್ಫ್ ಮಂಡಳಿಯು ಕೂಡಾ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೇ ಇರುವುದು ರಾಜ್ಯದ ಬಿಜೆಪಿ ಸರಕಾರದೊಂದಿಗೆ ವಕ್ಫ್ ಮಂಡಳಿಯೂ ಕೈಜೋಡಿಸಿರುವುದು ಸ್ಪಷ್ಟವಾಗಿದೆ. ವಕ್ಫ್ ಜಮೀನನ್ನು ರಕ್ಷಿಸಲು ವಿಫಲಗೊಂಡಿರುವ ಸರಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರುಗಳು ತಕ್ಷಣವೇ ರಾಜಿನಾಮೆ ನೀಡಬೇಕೆಂದು ಮೊಯಿದಿನಬ್ಬ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story





