ಕೊಡವೂರು ಮಸೀದಿ; ಜೂ.28ರಂದು ಸರಕಾರದ ಕ್ರಮ ಖಂಡಿಸಿ ಪ್ರತಿಭಟನೆ
ಉಡುಪಿ, ಜೂ.27: ಕೊಡವೂರು ಕಲ್ಮತ್ ಮಸೀದಿ ಜಾಗವನ್ನು ಕಾನೂನು ಬಾಹಿರವಾಗಿ ವಾಪಸು ಪಡೆದಿರುವ ಸರಕಾರದ ಕ್ರಮ ವನ್ನು ಖಂಡಿಸಿ ಜಸ್ಟಿಸ್ ಫಾರ್ ಕಲ್ಮತ್ ಮಸೀದಿ ಫೋರಂ ನೇತೃತ್ವದಲ್ಲಿ ಜೂ.28ರಂದು ಬೆಳಗ್ಗೆ 10.30ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕಲ್ಮತ್ ಮಸೀದಿ ಕಾನೂನಿನ ಅಡಿಯಲ್ಲಿ ಗಜೆಟ್ ಮೂಲಕ ಮಂಜೂರಾದ ಮಸೀದಿ ಜಾಗವನ್ನು ಸಕಾರಣವಿಲ್ಲದೆ ಬಿಜೆಪಿ ಸರಕಾರವು ತನ್ನ ರಾಜಕೀಯ ಲಾಭಕ್ಕಾಗಿ ಕಾನೂನುಬಾಹಿರವಾಗಿ ವಶಕ್ಕೆ ಪಡೆದಿರುವುದು ಖಂಡನೀಯ. ಸ್ಥಾಪಿತ ಹಿತಾಸಕ್ತಿಗಳು ಧಾರ್ಮಿಕ ಅಲ್ಪಸಂಖ್ಯಾತರ ಇತರ ಆರಾಧನಾಲಯಗಳ ಮೇಲೆ ಹಕ್ಕು ಸ್ಥಾಪಿಸಲು ಮತ್ತು ಜಿಲ್ಲೆಯ ಸೌಹಾರ್ದ ಕೆಡಿಸಲು ಮುಂದಾಗಿದೆ ಎಂದು ಫೋರಂ ಅಧ್ಯಕ್ಷ ಆಸಿಫ್ ಕೋಟೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





