ಮೂರು ವರ್ಷದ ಭುವನ್‍ಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ

ಚಿಕ್ಕಮಗಳೂರು, ಜೂ.27: ನಗರದ 2 ವರ್ಷ 11 ತಿಂಗಳ ಬಾಲಕ ಎಸ್.ಭುವನ್ 2021ರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರ್ಪಡೆಗೊಂಡಿದ್ದಾನೆ.
ತಾಲೂಕಿನ ಗೌಡನಹಳ್ಳಿ ಗ್ರಾಮದ ಶಿವ ಮತ್ತು ದೀಪಿಕಾ ದಂಪತಿ ಮಗನಾಗಿರುವ ಎಸ್.ಭುವನ್ ಚಿಕ್ಕ ವಯಸ್ಸಿನಲ್ಲೇ ಕನ್ನಡ, ಹಿಂದಿ, ಇಂಗ್ಲೀಷ್‍ನಲ್ಲಿ 1ರಿಂದ 20 ಅಂಕಿಗಳು, 1 ಮತ್ತು 2 ಟೇಬಲ್ಸ್, ತಿಂಗಳು, ಕನ್ನಡ ಕಾಗುಣಿತ, ಇಂಗ್ಲೀಷ್ ವರ್ಣಮಾಲೆ, ಜ್ಞಾನಪೀಠ ಪ್ರಶಸ್ತಿ ವಿಜೇತರು, ಐತಿಹಾಸಿಕ ಸ್ಥಳಗಳು, ವಿವಿಧ ದೇಶಗಳ ರಾಷ್ಟ್ರಧ್ವಜಗಳು, ಕನ್ನಡ ಇಂಗ್ಲೀಷ್ ಭಾಷಾಂತರ ಹೀಗೆ ಅನೇಕ ವಿಷಯಗಳ ಜ್ಞಾನವನ್ನು ಎಳೆಯ ವಯಸ್ಸಿನಲ್ಲೇ ಸಂಪಾದಿಸಿಕೊಂಡಿದ್ದಾನೆ.
ಕಿರಿಯ ವಯಸ್ಸಿನಲ್ಲೇ ಈತನ ಈ ಜ್ಞಾನಶಕ್ತಿಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯಲ್ಲಿ ಈತನ ಹೆಸರು ಸೇರ್ಪಡೆಗೊಂಡಿದೆ ಎಂದು ತಿಳಿದುಬಂದಿದೆ. ಈತನ ಸಾಧನೆಯನ್ನು ಜಿಲ್ಲೆಯ ಜನತೆ ಪ್ರಶಂಸಿದ್ದಾರೆ.
Next Story





