ಆರ್.ರವೀಂದ್ರ ಪೈ
ಮೂಡುಬಿದಿರೆ : ಇಲ್ಲಿನ ಜವುಳಿ ವರ್ತಕರ ಸಂಘದ ಅಧ್ಯಕ್ಷ ಆರ್.ರವೀಂದ್ರ ಪೈ (59) ಅವರು ಹೃದಯಾಘಾತದಿಂದ ರವಿವಾರ ನಿಧನ ಹೊಂದಿದರು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.
ಶ್ರೀ ಮಹಾವೀರ ಕಾಲೇಜಿನಲ್ಲಿ ವಿಜ್ಞಾನ ಪದವಿ ಗಳಿಸಿ ನಂತರ ತನ್ನ ತಂದೆ ಆರ್.ಪಾಂಡುರಂಗ ಅವರು ಸ್ಥಾಪಿಸಿ ನಡೆಸುತ್ತಿದ್ದ "ಭಾರತ್ ಟೆಕ್ಸ್ ಟೈಲ್ಸ್"ನಲ್ಲಿ ತಂದೆ ಮತ್ತು ಅಣ್ಣನ ಜತೆ ವ್ಯವಹಾರದಲ್ಲಿ ಅನುಭವ ಗಳಿಸಿ ಮುಂದೆ ಮೂಡುಬಿದಿರೆಯ ಜವುಳಿ ಅದರಲ್ಲೂ ಸಿದ್ಧ ಉಡುಪುಗಳಲ್ಲಿ ಹೊಸ ಟ್ರೆಂಡ್ ಮೂಡಿಸಿದ "ಸಿದ್ಧ" ಹೆಸರಿನ ಉಡುಪುಗಳ ಮಳಿಗೆಯನ್ನು ಸ್ಥಾಪಿಸಿದರು.
ಯುವಕನಾಗಿದ್ದಾಗ ಕತೆ, ಕವನ ಬರೆಯುತ್ತಿದ್ದ ಅವರು ದೈನಿಕ ಪತ್ರಿಕೆಯೊಂದಕ್ಕೆ ನೂರಿಪ್ಪತ್ತಕ್ಕೂ ಅಧಿಕ ಸಿನಿ-ಲೇಖನಗಳನ್ನು ಬರೆದಿದ್ದರು. ಅಲ್ಲದೆ ರಂಗಕರ್ಮಿ ಐ.ಕೆ.ಬೊಳುವಾರು ಸಂಚಾಲಿತ ಮೂಡುಬಿದಿರೆಯ ಚದುರಂಗ ಸ್ವ-ಅಧ್ಯಯನ ನಾಟಕ ಶಾಲೆಯ ನಾಟಕಗಳಲ್ಲೂ ಕಾಣಿಸಿಕೊಂಡಿದ್ದರು.
Next Story





