ಯುರೋ ಕಪ್: ಝೆಕ್ ಗಣರಾಜ್ಯ ಕ್ವಾರ್ಟರ್ ಫೈನಲ್ ಗೆ ಲಗ್ಗೆ
ನೆದರ್ ಲ್ಯಾಂಡ್ ವಿರುದ್ಧ 2-0 ಗೆಲುವು

photo : twitter/@EURO2020
ಬುಡಾಪೆಸ್ಟ್: ದ್ವಿತೀಯಾರ್ಧದಲ್ಲಿ ಗಳಿಸಿದ ಅವಳಿ ಗೋಲು ನೆರವಿನಿಂದ ಝೆಕ್ ಗಣರಾಜ್ಯ ತಂಡ ನೆದರ್ ಲ್ಯಾಂಡ್ ತಂಡವನ್ನು ಸೋಲಿಸಿ ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದೆ.
ರವಿವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. 68ನೇ ನಿಮಿಷದಲ್ಲಿ ಗೋಲು ಗಳಿಸಿದ ಟಾಮಸ್ ಹೋಲ್ ಝೆಕ್ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
80ನೇ ನಿಮಿಷದಲ್ಲಿ ಗೋಲು ಬಾರಿಸಿದ ಪ್ಯಾಟ್ರಿಕ್ ಶಿಕ್ ಝೆಕ್ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಈ ಮೂಲಕ ನೆದರ್ ಲ್ಯಾಂಡ್ ಗೆ ಒತ್ತಡ ಹೇರಿದರು.
ಡಚ್ಚರ ವಿರುದ್ದ ಉತ್ತಮ ದಾಖಲೆ ಹೊಂದಿರುವ ಝೆಕ್ ಗಣರಾಜ್ಯ ಜುಲೈ 3 ರಂದು ನಡೆಯುವ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ.
Next Story





