ಜಮ್ಮುವಿನಲ್ಲಿ ಮತ್ತೊಂದು ಸ್ಫೋಟಕ ಪತ್ತೆ
ಜಮ್ಮು: ಜಮ್ಮುವಿನ ವಾಯುಪಡೆ ವಿಮಾನನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಫೋಟಿಸಿದ ಕೆಲವೇ ಗಂಟೆಗಳಲ್ಲಿ ಸುಮಾರು 6 ಕಿ.ಗ್ರಾಂನಷ್ಟು ಸುಧಾರಿತ ಸ್ಫೋಟಕ ಸಾಧನ(ಐಇಡಿ)ಯನ್ನು ಪತ್ತೆಹಚ್ಚಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಈ ಸ್ಫೋಟಕವನ್ನು ಜನಗಂಗುಳಿಯ ಪ್ರದೇಶದಲ್ಲಿ ಸ್ಫೋಟಿಸುವ ಉದ್ದೇಶದಿಂದ ಲಷ್ಕರೆ ತೈಯಬ ಉಗ್ರರು ರವಾನಿಸಿರುವ ಶಂಕೆಯಿದೆ. ಸ್ಫೋಟಕವನ್ನು ಸಕಾಲದಲ್ಲಿ ಪತ್ತೆ ಹಚ್ಚಿರುವುದರಿಂದ ವಿಮಾನನಿಲ್ದಾಣದ ಅವಳಿಸ್ಫೋಟದ ಬೆನ್ನಿಗೇ ಭಾರೀ ಸ್ಫೋಟ ನಡೆಸುವ ಉಗ್ರರ ಸಂಚು ವಿಫಲವಾಗಿದೆ. ಭದ್ರತಾ ಪಡೆಗಳು ತನಿಖೆ ಆರಂಭಿಸಿದ್ದು ಶಂಕಿತರನ್ನು ಶೀಘ್ರ ಬಂಧಿಸುವ ವಿಶ್ವಾಸವಿದೆ ಎಂದು ಜಮ್ಮು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
Next Story