ಬೆಳ್ತಂಗಡಿ: ವಿಪರೀತ ವಾಹನ ದಟ್ಟಣೆ; ಟ್ರಾಫಿಕ್ ಜಾಮ್

ಬೆಳ್ತಂಗಡಿ, ಜೂ.28: ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಎರಡು ದಿನ ಬಂದ್ ಆಗಿದ್ದ ಬೆಳ್ತಂಗಡಿ ಪೇಟೆಯಲ್ಲಿ ಸೋಮವಾರ ಬೆಳಗ್ಗೆಯಿಂದ ವಿಪರೀತ ವಾಹನ ದಟ್ಟಣೆ ಕಂಡುಬಂದಿದೆ. ಇದರಿಂದ ಪೇಟೆಯಲ್ಲಿ ಹಲವು ಬಾರಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಯಿತು.
ಸರಕಾರದ ಕೊರೋನ ಮಾರ್ಗಸೂಚಿಗಳನ್ನು ಲೆಕ್ಕಿಸದೆ ಜನ ಇಂದು ಬೆಳಗ್ಗೆಯಿಂದ ಪೇಟೆಗೆ ಬಂದಿದ್ದು ಪೇಟೆಯಲ್ಲಿ ವಾಹನಗಳು ತುಂಬಿ ತುಳುಕುತ್ತಿದೆ. ಸಂತೆಕಟ್ಟೆಯಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೂ ವಾಹನದಟ್ಟಣೆ ಕಾಣಿಸಿಕೊಂಡಿತ್ತು. ಗುರುವಾಯನಕೆರೆಯಲ್ಲಿಯೂ ಹಲವು ಬಾರಿ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿತ್ತು.
Next Story





