ಧರ್ಮೇಂದ್ರ ಚತುರ್ ರಾಜೀನಾಮೆ ಬಳಿಕ 'ಕುಂದುಕೊರತೆ ಪರಿಹಾರ ಅಧಿಕಾರಿʼಯಾಗಿ ಕ್ಯಾಲಿಫೋರ್ನಿಯ ಮೂಲದ ಜೆರೆಮಿ ಕೆಸೆಲ್ ನೇಮಕ

ಹೊಸದಿಲ್ಲಿ: ಟ್ವಿಟರ್ ಕ್ಯಾಲಿಫೋರ್ನಿಯಾ ಮೂಲದ ಜೆರೆಮಿ ಕೆಸೆಲ್ ಅವರನ್ನು 2021 ರ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ ಭಾರತದ ಹೊಸ ಕುಂದುಕೊರತೆ ಅಧಿಕಾರಿಯಾಗಿ ನೇಮಿಸಿದೆ. ಕೆಸೆಲ್ ಟ್ವಿಟ್ಟರ್ ನ ಜಾಗತಿಕ ಕಾನೂನು ನೀತಿ ನಿರ್ದೇಶಕರಾಗಿದ್ದಾರೆ.
ರವಿವಾರ ಸಂಜೆ ಭಾರತದ ಟ್ವಿಟರ್ ಕುಂದು ಕೊರತೆ ಪರಿಹಾರ ಅಧಿಕಾರಿಯಾಗಿ ನೇಮಕವಾಗಿದ್ದ ಧರ್ಮೇಂದ್ರ ಚತುರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಭಾರತ ಸರ್ಕಾರವು ಟ್ವಿಟರ್‌ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ ಎಂದು bar&bench ತಿಳಿಸಿದೆ.
Next Story





