ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ಯಾಕ್ಸಿ ಚಾಲಕರಿಗೆ ಉಚಿತ ಕೋವಿಡ್ ಲಸಿಕೆಗೆ ಮನವಿ

ಮಂಗಳೂರು, ಜೂ.28: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಟ್ಯಾಕ್ಸಿ ಚಾಲಕರಿಗೆ ಉಚಿತವಾಗಿ ಕೊರೋನ ಲಸಿಕೆ ನೀಡಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮತ್ತು ಮುಲ್ಕಿ-ಮೂಡುಬಿದಿರೆ ಕಾಂಗ್ರೆಸ್ ಉಸ್ತುವಾರಿ ಮಿಥುನ್ ರೈ ನೇತೃತ್ವದಲ್ಲಿ ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಮೂಲಕ ಆಡಳಿತಧಿಕಾರಿ ಅಶ್ತೋಶ್ ಚಂದ್ರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ವೆಲೇರಿಯನ್ ಸಿಕ್ವೇರ, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಮರವೂರು ಪಂಚಾಯತ್ ಸದಸ್ಯ ಬಾಬುಶೆಟ್ಟಿ, ಖಾದರ್ ಏರ್ ಪೋರ್ಟ್ ಮತ್ತು ಕಾರು ಚಾಲಕರು ಉಪಸ್ಥಿತರಿದ್ದರು.
Next Story





