ತೊಕ್ಕೊಟ್ಟು: ‘ಲಿಬಾಸ್’ ಸಿದ್ಧ ಉಡುಪುಗಳ ಮಳಿಗೆ ಶುಭಾರಂಭ
![ತೊಕ್ಕೊಟ್ಟು: ‘ಲಿಬಾಸ್’ ಸಿದ್ಧ ಉಡುಪುಗಳ ಮಳಿಗೆ ಶುಭಾರಂಭ ತೊಕ್ಕೊಟ್ಟು: ‘ಲಿಬಾಸ್’ ಸಿದ್ಧ ಉಡುಪುಗಳ ಮಳಿಗೆ ಶುಭಾರಂಭ](https://www.varthabharati.in/sites/default/files/images/articles/2021/06/28/296627-1624900510.jpg)
ಮಂಗಳೂರು, ಜೂ.28: ರಾ.ಹೆ.66ರ ತೊಕ್ಕೊಟ್ಟು ಜಂಕ್ಷನ್ ಬಳಿಯ ಸಮೃದ್ಧಿ ಆರ್ಕೇಡ್ನಲ್ಲಿರುವ ‘ಲಿಬಾಸ್’ ಮಹಿಳೆಯರ ಸಿದ್ಧ ಉಡುಪುಗಳ ಮಳಿಗೆಯು ಸೋಮವಾರ ಶುಭಾರಂಭಗೊಂಡಿತು.
ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ‘ಪ್ರಾಮಾಣಿಕತೆಯಿಂದ ವ್ಯವಹಾರ ನಡೆಸಿದರೆ ಸರ್ವ ಧರ್ಮೀಯರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಿದೆ. ಅಲ್ಲದೆ ಉದ್ಯಮದಲ್ಲೂ ಯಶಸ್ಸು ಗಳಿಸಬಹುದು. ‘ಲಿಬಾಸ್’ನ ಮೊದಲ ಶಾಖೆಯು ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ತೆರೆದಿರುವುದು ಸಂತೋಷದ ವಿಚಾರ. ಜಿಲ್ಲಾದ್ಯಂತ ‘ಲಿಬಾಸ್’ ಮತ್ತಷ್ಟು ಮಳಿಗೆಗಳು ತೆರೆಯಲಿ ಎಂದು ಆಶಿಸಿದರು.
ಲಿಬಾಸ್ನ ಮಾಲಕ ಮುಹಮ್ಮದ್ ಅಯ್ಯೂಬ್ ಕಾರ್ಕಳ, ಹಿತೈಷಿಗಳಾದ ಅಬ್ದುಸ್ಸಲಾಂ, ಮುಹಮ್ಮದ್ ಹನೀಫ್ ಕಾಪು, ಸುರೇಶ್ ಭಟ್ನಗರ, ರೂಪೇಶ್ ಭಟ್ನಗರ, ಮನೋಜ್ ರೈ, ಯುವರಾಜ ಬೆಂಗ್ರೆ, ಮುಹಮ್ಮದ್ ಅಲ್ತಾಫ್ ಮತ್ತಿತರರು ಉಪಸ್ಥಿತರಿದ್ದರು.