ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಯುವಕನಿಗೆ ಗಂಭೀರ ಗಾಯ
ಸಾಗರ, ಜೂ.28: ರೈಲು ಹತ್ತುವಾಗ ಪ್ಲಾಟ್ ಫಾರ್ಮ್ ಜಾರಿದ ಹಿನ್ನಲೆ ಕಾಲು ಜಾರಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದು ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ತಾಳಗುಪ್ಪ ರೈಲು ನಿಲ್ದಾಣದಲ್ಲಿ ನಡೆದಿದೆ.
ತಾಳಗುಪ್ಪ-ಬೆಂಗಳೂರು ರೈಲು ಹತ್ತುವಾಗ ಈ ಘಟನೆ ನಡೆದಿದ್ದು ರೈಲಿನ ಗಾಲಿಗೆ ಸಿಕ್ಕಿ ಒಂದು ಕಾಲು ಮತ್ತು ಕೈ ದೇಹದಿಂದ ಸಂಪೂರ್ಣ ಬೇರ್ಪಟ್ಟಿದ್ದು ಈತನನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನವೀನ್ (18) ಎಂದು ಗುರುತಿಸಲಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.
Next Story





