Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೋವಿಡ್ ಸಾವಿಗೆ ಪರಿಹಾರ ನೀಡಲೇಬೇಕು

ಕೋವಿಡ್ ಸಾವಿಗೆ ಪರಿಹಾರ ನೀಡಲೇಬೇಕು

ವಾರ್ತಾಭಾರತಿವಾರ್ತಾಭಾರತಿ29 Jun 2021 12:10 AM IST
share
ಕೋವಿಡ್ ಸಾವಿಗೆ ಪರಿಹಾರ ನೀಡಲೇಬೇಕು

ಕಳೆದ ಎರಡು ವರ್ಷಗಳಿಂದ ಕೋವಿಡ್-19 ಸೋಂಕಿನಿಂದ ಜಗತ್ತಿನ ಇತರ ದೇಶಗಳಂತೆ ಭಾರತವೂ ತತ್ತರಿಸಿ ಹೋಗಿದೆ. ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಆದಾಯದ ಮೂಲವೇ ಬತ್ತಿ ಹೋಗಿ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ಅಂತಲೇ ಮೊದಲನೇ ಅಲೆ ಅಪ್ಪಳಿಸಿದ ಆನಂತರ ಕೇಂದ್ರ ಸರಕಾರ ಕೋವಿಡ್ ಸಾಂಕ್ರಾಮಿಕವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ನೀಡಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಕೇಂದ್ರ ಸರಕಾರ ಪರಿಹಾರ ನೀಡಲು ಒಪ್ಪಿಕೊಂಡಿಲ್ಲ. ಕೋವಿಡ್ ವೈರಾಣುವಿನಿಂದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ಸರಕಾರದ ತೆರಿಗೆ ವರಮಾನ ಕಡಿಮೆಯಾಗಿದೆ.ಆರೋಗ್ಯ ಪಾಲನೆಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.

ಈ ಸಾಂಕ್ರಾಮಿಕ ಕಾಯಿಲೆಯ ಪ್ರಮಾಣ ದೊಡ್ಡದು. ಇದರ ಪರಿಣಾಮ ವ್ಯಾಪಕವಾದುದು ಹಾಗಾಗಿ ನೈಸರ್ಗಿಕ ಪ್ರಕೋಪಗಳ ಸಂದರ್ಭಗಳಲ್ಲಿ ನೆರವು ನೀಡುವ ಯೋಜನೆಯನ್ನು ಕೋವಿಡ್ ಸಾಂಕ್ರಾಮಿಕಕ್ಕೆ ಅನ್ವಯಿಸಲು ಆಗುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ನೀಡಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಕೇಂದ್ರ ಸರಕಾರದ ಈ ವಾದ ನ್ಯಾಯ ಸಮ್ಮತವಲ್ಲ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಹನ್ನೆರಡು ವಿಪತ್ತುಗಳನ್ನು ಗುರುತಿಸಲಾಗಿದೆ. ಈ ಕಾಯ್ದೆಯ ಪ್ರಕಾರವೇ ಕೋವಿಡ್-19 ಸಾಂಕ್ರಾಮಿಕವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ 2020ರ ಮಾರ್ಚ್ ತಿಂಗಳಲ್ಲಿ ಘೋಷಿಸಿದೆ. ಹಾಗಾಗಿ ಕಾನೂನು ಪ್ರಕಾರ ಕೋವಿಡ್ ಸೋಂಕಿಗೆ ಬಲಿಯಾದ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಕೇಳುವುದರಲ್ಲಿ ತಪ್ಪಿಲ್ಲ.

ಪ್ರವಾಹ, ಭೂ ಕುಸಿತದಂತಹ ದುರಂತಗಳು ಪದೇ ಪದೇ ಸಂಭವಿಸುವುದಿಲ್ಲ. ಆದರೆ ಕೋವಿಡ್ ಸಾಂಕ್ರಾಮಿಕ ಹಾಗಲ್ಲ, ಇದು ಸಾರ್ವತ್ರಿಕವಾಗಿ ಬಾಧಿಸುತ್ತಿರುವ ಸಮಸ್ಯೆ. ಹೀಗಾಗಿ ಪರಿಹಾರ ಕೊಡಲು ಆಗುವುದಿಲ್ಲ ಎಂಬ ಸರಕಾರದ ವಾದ ಸಮರ್ಥನೀಯವಲ್ಲ. ಕೋವಿಡ್‌ನಿಂದ ಲಕ್ಷಾಂತರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಬಹುತೇಕ ಕುಟುಂಬಗಳು ತಮ್ಮ ಕುಟುಂಬದ ಕೋವಿಡ್ ಪೀಡಿತರನ್ನು ಬದುಕಿಸಿಕೊಳ್ಳಲು ವೈದ್ಯಕೀಯ ವೆಚ್ಚಗಳಿಗಾಗಿ ಭಾರೀ ಪ್ರಮಾಣದ ಹಣವನ್ನು ಖರ್ಚು ಮಾಡಿ ಬೀದಿಗೆ ಬಿದ್ದಿವೆ. ಇಂತಹ ಆತಂಕದ ಸನ್ನಿವೇಶದಲ್ಲಿ ತಾನೇ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ ಮೇಲೆ ನೊಂದವರ ಕುಟುಂಬಗಳ ನೆರವಿಗೆ ಬರುವುದು ಸರಕಾರದ ಕರ್ತವ್ಯ ಮಾತ್ರವಲ್ಲ ಹೊಣೆಗಾರಿಕೆಯಾಗಿದೆ.ಇಂತಹ ಮಾನವೀಯ ಪ್ರಶ್ನೆಯಲ್ಲಿ ಸರಕಾರ ಚೌಕಾಸಿ ವ್ಯಾಪಾರ ಮಾಡಬಾರದು. ಭಾರೀ ಬಂಡವಾಳಗಾರರ, ಕಾರ್ಪೊರೇಟ್ ಕಂಪೆನಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ಸರಕಾರಕ್ಕೆ ಕೋವಿಡ್ ಸಾವುಗಳಿಗೆ ಪರಿಹಾರ ನೀಡುವುದು ದೊಡ್ಡ ಸಮಸ್ಯೆಯಾಗಬಾರದು.

ಕೋವಿಡ್ ಎರಡನೇ ಅಲೆ ಬರುತ್ತದೆ ಎಂದು ವೈದ್ಯಕೀಯ ತಜ್ಞರು ಕಳೆದ ವರ್ಷದ ಅಕ್ಟೋಬರ್‌ನಲ್ಲೇ ಎಚ್ಚರಿಕೆ ನೀಡಿದರೂ ಸರಕಾರ ಜಾಗ್ರತೆ ವಹಿಸಲಿಲ್ಲ. ಅಪಾಯದ ಮುನ್ಸೂಚನೆ ಇದ್ದಾಗಲೂ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆ ನಡೆಸಲಾಯಿತು. ಈ ಚುನಾವಣೆಗಳ ಪ್ರಚಾರ ಸಭೆಗಳಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡರು. ಸಾವಿರಾರು ಜನರ ಸಭೆಗಳನ್ನು ಉದ್ದೇಶಿಸಿ ಮಾತಾಡಿದರು. ಪಶ್ಚಿಮ ಬಂಗಾಳದ ಭಾರೀ ಸಭೆಯೊಂದರಲ್ಲಿ ರೋಮಾಂಚಿತರಾದ ಮೋದಿಯವರು ‘‘ಇಂತಹ ಜನಸ್ತೋಮವನ್ನು ನೋಡಿಯೇ ಇಲ್ಲ’’ ಎಂದು ಉದ್ಗರಿಸಿದರು. ಇನ್ನೊಂದೆಡೆ ಹರಿದ್ವಾರದಲ್ಲಿ ಕುಂಭಮೇಳದಲ್ಲಿ ನಲವತ್ತು ಲಕ್ಷಕ್ಕೂ ಹೆಚ್ಚು ಜನ ಸೇರಲು ಸರಕಾರ ಅವಕಾಶ ನೀಡಿತು. ಹೀಗಾಗಿ ಸೋಂಕು ವ್ಯಾಪಕವಾಗಿ ಹಬ್ಬಿತು.

ಇದಲ್ಲದೆ ಕೋವಿಡ್ ಎರಡನೇ ಅಲೆಯ ಅಪಾಯವಿದ್ದರೂ ನಮ್ಮ ಸರಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲಿಲ್ಲ. ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಇಲ್ಲದೆ ಭಾರೀ ಸಂಖ್ಯೆಯಲ್ಲಿ ಜನ ಕೋವಿಡ್‌ಗೆ ಬಲಿಯಾದರು. ಕರ್ನಾಟಕದ ಚಾಮರಾಜನಗರದಲ್ಲಿ ಮೂವತ್ತಕ್ಕೂ ಹೆಚ್ಚು ಜನ ಅಸು ನೀಗಿದರು. ಅಲ್ಲಿ ಮಾತ್ರವಲ್ಲ ಬೆಳಗಾವಿ, ಕಲಬುರಗಿ, ಬಾಗಲಕೋಟೆಗಳಲ್ಲೂ ಪ್ರಾಣವಾಯು ಇಲ್ಲದೆ ಜನರ ಸಾವುಗಳು ಸಂಭವಿಸಿದವು. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಇದೇ ಸಂದರ್ಭವನ್ನು ಬಳಸಿಕೊಂಡು ಬಡ, ಮಧ್ಯಮ ವರ್ಗದ ರೋಗಿಗಳಿಂದ ಲಕ್ಷಾಂತರ ರೂಪಾಯಿ ಕಿತ್ತು ಕೊಂಡವು. ಅನೇಕ ಕಡೆ ಸಾವಿಗೀಡಾದವರ ಅಂತ್ಯಕ್ರಿಯೆ ನಡೆಸಲು ಜನಸಾಮಾನ್ಯರು ಪರದಾಡಬೇಕಾಯಿತು.ಇದರ ಹೊಣೆಯನ್ನು ಸರಕಾರವೇ ಹೊರಬೇಕಾಗುತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸರಿಯಾಗಿದ್ದರೆ ಈ ಸಾವುಗಳು ಸಂಭವಿಸುತ್ತಿರಲಿಲ್ಲ.

ಕಳೆದ ವರ್ಷದ ಕೋವಿಡ್ ಸಮಯದಲ್ಲಿ ಸರಕಾರಕ್ಕೆ ಅದರಲ್ಲೂ ವಿಶೇಷವಾಗಿ ಪಿ.ಎಂ.ಕೇರ್ಸ್ ನಿಧಿಗೆ ಸಾವಿರಾರು ಕೋಟಿ ರೂಪಾಯಿ ಹರಿದು ಬಂದಿದೆ. ವಿದೇಶದಿಂದಲೂ ನೆರವು ಬಂದಿದೆ. ಹೀಗಾಗಿ ಕೋವಿಡ್‌ನಿಂದ ಸಾವಿಗೀಡಾದವರ ಕುಟುಂಬಗಳ ಕಣ್ಣೀರು ಒರೆಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ತಾತ್ಸಾರದ ಭಾವನೆ ತೋರಿಸಬಾರದು. ಸರಕಾರಕ್ಕೆ ಸಂಪನ್ಮೂಲಗಳ ಕೊರತೆ ಇದ್ದರೆ ಕೋವಿಡ್ ಕಾಲದಲ್ಲೂ ಲಕ್ಷಾಂತರ ರೂಪಾಯಿ ಲಾಭವನ್ನು ಮಾಡಿಕೊಂಡ ಕಾರ್ಪೊರೇಟ್ ಕಂಪೆನಿಗಳ ಮೇಲೆ ಕೋವಿಡ್ ತೆರಿಗೆ ಎಂಬ ವಿಶೇಷ ತೆರಿಗೆಯನ್ನು ಹಾಕಿ ವಸೂಲಿ ಮಾಡಿ ಕೋವಿಡ್‌ನಿಂದ ಅಸು ನೀಗಿದವರ ಕುಟುಂಬಗಳಿಗೆ ಸರಕಾರ ತಕ್ಷಣ ಪರಿಹಾರ ನೀಡಬೇಕು.

ಆರೋಗ್ಯ ಎಂಬುದು ಒಂದು ದೇಶದ ಪ್ರಜೆಗಳ ಮೂಲಭೂತ ಹಕ್ಕು. ಅದು ಎಂದಿಗೂ ವ್ಯಾಪಾರೀಕರಣವಾಗಬಾರದು. ಆದರೆ ನಮ್ಮ ದೇಶದಲ್ಲಿ ಸ್ವಾತಂತ್ರಾನಂತರ ಅದರಲ್ಲೂ ಜಾಗತೀಕರಣ ಪ್ರವೇಶಿಸಿದ ತೊಂಭತ್ತರ ದಶಕದ ನಂತರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ದುಡ್ಡು ಗಳಿಸುವ ದಂಧೆಗಳಾಗಿವೆ. ಸಾರ್ವಜನಿಕ ಆರೋಗ್ಯ ವಲಯ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಬಾರಿ ವೈದ್ಯರ ಕೊರತೆಯಿಂದಾಗಿ ದಾದಿಯರೇ ಅನೇಕ ಕಡೆ ಸನ್ನಿವೇಶವನ್ನು ನಿಭಾಯಿಸಿದರು. ಅನೇಕ ಕಡೆ ಆಯುರ್ವೇದ, ಹೋಮಿಯೋಪತಿ ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಯಿತು. ಹೀಗೆ ಕೋವಿಡ್ ಯೋಧರಾಗಿ ಸೇವೆ ಸಲ್ಲಿಸಿದವರ ಸಂಬಳ, ಭತ್ತೆಗಳನ್ನೂ ಸಮರ್ಪಕವಾಗಿ ಪಾವತಿ ಮಾಡಿಲ್ಲ. ಮುಂದೆ ಹೀಗಾಗದಂತೆ ಸರಕಾರ ನೋಡಿಕೊಳ್ಳಬೇಕಾಗಿದೆ.

ನಿಜ ಸರಕಾರಕ್ಕೂ ಸಂಪನ್ಮೂಲಗಳ ಕೊರತೆ ಇರಬಹುದು. ಆದರೆ ಅದು ಪ್ರಜೆಗಳ ಆರೋಗ್ಯ ರಕ್ಷಣೆಗೆ ಅಡ್ಡಿಯಾಗಬಾರದು. ಕೋವಿಡ್ ಸಾಂಕ್ರಾಮಿಕದಿಂದ ಅಸುನೀಗಿದವರ ಖಚಿತ ಸಂಖ್ಯೆ ಲಭ್ಯವಾಗಿಲ್ಲ. ಒಂದು ಅಂದಾಜಿನ ಪ್ರಕಾರ ನಾಲ್ಕು ಲಕ್ಷ ಜನ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಸರಕಾರ ಸಾವಿನ ನಿಜವಾದ ಸಂಖ್ಯೆಯನ್ನು ಪ್ರಕಟಿಸುತ್ತಿಲ್ಲ ಎಂಬ ದೂರುಗಳೂ ಇವೆ. ಅದೇನೇ ಇರಲಿ ಕೋವಿಡ್ ಪೀಡಿತರನ್ನು ಬದುಕಿಸಿಕೊಳ್ಳಲು ಆಗದಿದ್ದರೂ ಸಾವಿಗೀಡಾದವರ ಕುಟುಂಬಗಳಿಗೆ ಪರಿಹಾರ ನೀಡಲು ಸರಕಾರ ಮುಂದಾಗಬೇಕು. ಇದು ಸರಕಾರದ ಹೊಣೆಗಾರಿಕೆಯಾಗಿದೆ.

ಎರಡನೇ ಸಲ ಕೋವಿಡ್ ಸೋಂಕು ವ್ಯಾಪಿಸಿದಾಗ ನಾವು ವೈರಿ ರಾಷ್ಟ್ರಗಳೆಂದು ಪರಿಗಣಿಸಿದವರಿಂದಲೂ ಸಹಾನುಭೂತಿ ವ್ಯಕ್ತವಾಯಿತು. ನೆರವು-ಪರಿಹಾರಗಳು ಹರಿದು ಬಂದವು. ಇಡೀ ಜಗತ್ತೇ ಗಾಬರಿಯಾಗುವಷ್ಟು ಇಂತಹ ಆತಂಕದ ದಾರುಣ ಸ್ಥಿತಿಗೆ ನಮ್ಮ ದೇಶ ತಲುಪಲು ಏನು ಕಾರಣ? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಸರಕಾರ ತನ್ನ ತಪ್ಪನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ನೊಂದವರಿಗೆ ಉದಾರವಾಗಿ ನೆರವಿನ ಹಸ್ತ ನೀಡಿದರೆ ಬೀದಿಗೆ ಬಿದ್ದ ಕುಟುಂಬಗಳು ನಿಟ್ಟುಸಿರು ಬಿಡಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X