ರೂಪಾಯಿ ದರದಲ್ಲಿ ವ್ಯತ್ಯಾಸ: ಇಳಿಕೆಯಾದ ಚಿನ್ನದ ದರ
ಮುಂಬೈ, ಜೂ. 28: ರೂಪಾಯಿ ದರದಲ್ಲಿನ ವ್ಯತ್ಯಾಸ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ಪರಿಣಾಮ ಮುಂಬೈಯ ರಿಟೈಲ್ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 116 ರೂಪಾಯಿ ಇಳಿಕೆಯಾಗಿದ್ದು, 47,089 ರೂಪಾಯಿಯಾಗಿದೆ.
ದೇಶಿ ಮಾರುಕಟ್ಟೆಯಲ್ಲಿ ಕಳೆದ ವಾರ ಚಿನ್ನದ ಬೆಲೆ 61 ರೂಪಾಯಿ ಅಥವಾ ಶೇಕಡ 0.13 ಇಳಿಕೆಯಾಗಿತ್ತು. ಮುಂಬೈಯಲ್ಲಿ 22 ಕ್ಯಾರಟ್ನ 10 ಗ್ರಾಮ ಚಿನ್ನದ ಬೆಲೆ 43,134 ರೂಪಾಯಿ ಹಾಗೂ ಶೇ. 3 ಜಿಎಸ್ಟಿ. 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 47,089 ರೂಪಾಯಿ ಹಾಗೂ ಜಿಎಸ್ಟಿ. ರಿಟೈಲ್ ಮಾರುಕಟ್ಟೆಯಲ್ಲಿ 18 ಕ್ಯಾರಟ್ ಚಿನ್ನದ ಬೆಲೆ 35,317 ರೂಪಾಯಿ ಹಾಗೂ ಜಿಎಸ್ಟಿ. ಬೆಳ್ಳಿಯ ಬೆಲೆ ಸೋಮವಾರ ಪ್ರತಿ ಕಿ.ಗ್ರಾಂ. ರೂಪಾಯಿ 67,900 ಇತ್ತು.
Next Story





