ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ನ ಹಿರಿಯ ಕಮಾಂಡರ್ ನ ಸೆರೆ

ಶ್ರೀನಗರ,ಜೂ,28: ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲಿನ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೈಬಾದ ಹಿರಿಯ ಕಮಾಂಡರ್ ನದೀಂ ಅಬ್ರಾರ್ ಎಂಬಾತನನ್ನು ಸೋಮವಾರ ಬಂಧಿಸಲಾಗಿದೆ.
‘ಅಬ್ರಾರ್ ಹಲವಾರು ಹತ್ಯೆಗಳಲ್ಲಿ ಭಾಗಿಯಾಗಿದ್ದ. ಆತನ ಬಂಧನ ನಮ್ಮ ದೊಡ್ಡ ಯಶಸ್ಸು ಆಗಿದೆ ’ ಐಜಿಪಿ (ಕಾಶ್ಮೀರ ವಲಯ) ವಿಜಯ ಕುಮಾರ ಟ್ವೀಟಿಸಿದ್ದಾರೆ.
ಬಂಧನದ ಕುರಿತು ಯಾವುದೇ ವಿವರಗಳನ್ನು ಕುಮಾರ ನೀಡಿಲ್ಲವಾದರೂ,ನಗರದ ಹೊರವಲಯದ ಪಾರಿಂಪೋರದ ತನಿಖಾಠಾಣೆಯ ಬಳಿ ಅಬ್ರಾರ್ ಮತ್ತು ಇನ್ನೋರ್ವ ಶಂಕಿತನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಮೂಲಗಳು ತಿಳಿಸಿದವು.
ಬಂಧಿತರಿಂದ ಒಂದು ಪಿಸ್ತೂಲು ಮತ್ತು ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ. ಈ ವರ್ಷದ ಮಾರ್ಚ್ನಲ್ಲಿ ಲವಯಪೋರದಲ್ಲಿ ನಡೆದಿದ್ದ ಮೂವರು ಸಿಆರ್ಪಿಎಫ್ ಸಿಬ್ಬಂದಿಗಳ ಹತ್ಯೆಗಳಲ್ಲಿ ಅಬ್ರಾರ್ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Next Story





