ಕೋವಿಡ್‌ನಿಂದ ಸಂಕಷ್ಟಕ್ಕೊಳಗಾದವರ ಮಾಹಿತಿ ಸಂಗ್ರಹ ಕಾಂಗ್ರೆಸ್‌ನಿಂದ ಸಮಿತಿ ರಚನೆ
ಮಂಗಳೂರು, ಜೂ.28: ಕೆಪಿಸಿಸಿ ಆದೇಶದ ಮೇರೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಾದ್ಯಂತ ಮನೆ ಮನೆಗೆ ಭೇಟಿ ನೀಡಿ ಕೋವಿಡ್‌ನಿಂದ ತೊಂದರೆಗೀಡಾದ ಜನರ ಮಾಹಿತಿಯನ್ನು ಸಂಗ್ರಹಿಸಲು ಸಮಿತಿಯನ್ನು ರಚಿಸಲಾಯಿತು.
ಸಮಿತಿಗೆ ಜಿಲ್ಲಾ ಸಂಯೋಜಕರಾಗಿ ಸದಾಶಿವ್ ಉಳ್ಳಾಲ್, ಸಹ ಸಂಯೋಜಕರಾಗಿ ವಿಶ್ವಾಸ್ ಕುಮಾರ್ ದಾಸ್, ಶೋಭಾ ಕೇಶವ್, ಶಾಲೆಟ್ ಪಿಂಟೊ, ಸವಾದ್ ಸುಳ್ಯ, ವಿಧಾನಸಭಾ ಸಂಯೋಜಕರಾಗಿ ಬೆಳ್ತಂಗಡಿಗೆ ರಮಾನಂದ ಪೂಜಾರಿ, ಸುಳ್ಯಕ್ಕೆ ಶಾಹುಲ್ ಹಮೀದ್ ಕೆ.ಕೆ., ಬಂಟ್ವಾಳಕ್ಕೆ ಶಬ್ಬೀರ್ ಎಸ್., ಮೂಡುಬಿದರೆಗೆ ಅಭಿಷೇಕ್ ಉಳ್ಳಾಲ್, ಪುತ್ತೂರಿಗೆ ಎಂ.ಪಿ. ಮನುರಾಜ್, ಉಳ್ಳಾಲಕ್ಕೆ ಟಿ.ಕೆ. ಸುಧೀರ್, ಮಂಗಳೂರು ದಕ್ಷಿಣಕ್ಕೆ ಲಾರೆನ್ಸ್ ಡಿಸೋಜ, ಮಂಗಳೂರು ಉತ್ತರಕ್ಕೆ ಪ್ರಸಾದ್ ರಾಜ್ ಕಾಂಚನ್ ಅವರನ್ನು ನೇಮಿಸಲಾಯಿತು. ಈ ಸಮಿತಿ ರಚಿಸಿದ ವರದಿಯನ್ನು ಡಿಸಿಸಿಗೆ ಕಳುಹಿಸಿಕೊಡುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದೀನ್ ಬಾವಾ, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರು ಉಪಸ್ಥಿತರಿದ್ದರು.





