Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೀಲಗಿರಿ ಬೆಟ್ಟಗಳಿಗೆ ಹತ್ತಿದ್ದು ಯಾವಾಗ?

ನೀಲಗಿರಿ ಬೆಟ್ಟಗಳಿಗೆ ಹತ್ತಿದ್ದು ಯಾವಾಗ?

ಡಾ.ನೆಲ್ಲುಕುಂಟೆ ವೆಂಕಟೇಶ್ಡಾ.ನೆಲ್ಲುಕುಂಟೆ ವೆಂಕಟೇಶ್29 Jun 2021 12:06 AM IST
share
ನೀಲಗಿರಿ ಬೆಟ್ಟಗಳಿಗೆ ಹತ್ತಿದ್ದು ಯಾವಾಗ?


 

► ಭಾಗ - 5

ಪುರಾತತ್ವ ಅಧ್ಯಯನಗಳ ಪ್ರಕಾರ ನೀಲಗಿರಿ ಬೆಟ್ಟಗಳಲ್ಲಿ ಪ್ರಥಮವಾಗಿ ಎರಡು ಬಾರಿ ಬೆಂಕಿ ಬಿದ್ದ ದಾಖಲೆಗಳು ಸಿಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮೊದಲನೆಯದಾಗಿ ಸುಮಾರು 22,000 ವರ್ಷಗಳ ಹಿಂದೆ ಮೊದಲ ಬೆಂಕಿ ಬಿದ್ದಿದೆ. ಅದು ನೈಸರ್ಗಿಕ ಕಾರಣಗಳಿಂದ ಬಿದ್ದಿರಬಹುದು, ಆದರೆ 3,000 ವರ್ಷಗಳ ಹಿಂದೆ ವ್ಯಾಪಕವಾಗಿ ಬೆಂಕಿ ಬಿದ್ದುದರ ಹಿಂದೆ ಮನುಷ್ಯರ ಕೈವಾಡವಿದೆಯೆಂಬ ತೀರ್ಮಾನಕ್ಕೆ ಬರಲಾಗಿದೆ. ತೋಡ, ಬಡಗ, ಕೋಟ, ಚೆಂಚು ಮುಂತಾದವರು ಬಹುಶಃ ಇದೇ ಕಾಲದ ಆಸುಪಾಸಿನಲ್ಲಿ ಶೋಲಾ ಕಾಡುಗಳಿಗೆ ಹತ್ತಿರಬಹುದು. ಒಣಹುಲ್ಲಿಗೆ ಬೆಂಕಿ ಹಚ್ಚಿದರೆ ಮಳೆಗಾಲಕ್ಕೆ ಒಳ್ಳೆಯ ಹುಲ್ಲು ಸಿಗುತ್ತದೆ ಎಂಬ ಉದ್ದೇಶದಿಂದ ಪಶುಪಾಲಕ ಸಮುದಾಯಗಳು ನಿಯಂತ್ರಿತ ಬೆಂಕಿ ಕೊಡುವ ಪದ್ಧತಿಯನ್ನು ಬಹಳ ಹಿಂದಿನಿಂದಲೇ ಅನುಸರಿಸುತ್ತಿದ್ದ ಹಾಗೆ ಕಾಣುತ್ತದೆ.

ಸಿಂಧೂ ಬಯಲುಗಳಲ್ಲಿ ಸ್ಟೆಪ್ ಕಡೆಯಿಂದ ಬಂದ ವೇದಕಾಲದ ಪಶುಪಾಲಕರು ಸ್ಥಳೀಯರ ನಡುವೆ ಸಂಘರ್ಷ ನಡೆದಿರಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕಲಾಗದೆಂದು ತಳಿವಿಜ್ಞಾನಿಗಳು, ಪುರಾತತ್ವಶಾಸ್ತ್ರಜ್ಞರು, ಪುರಾಣಶಾಸ್ತ್ರಜ್ಞರು ಮುಂತಾದವರು ವಿವರಿಸುತ್ತಾರೆ. ಈ ಕುರಿತ ಅನೇಕ ಮಾಹಿತಿಗಳು ಋಗ್ವೇದದಲ್ಲೂ ದೊರಕುತ್ತವೆ. ಇಂದ್ರನೆಂಬ ನಾಯಕ ಪುರಗಳು, ಕೋಟೆಗಳು, ಅಣೆಕಟ್ಟೆಗಳು ಮುಂತಾದವುಗಳನ್ನು ಹೇಗೆ ಧ್ವಂಸ ಮಾಡಿದ, ಮೂರ್ತಿ ಪೂಜೆ ಮಾಡುವವರನ್ನು, ವಿಗ್ರಹಾರಾಧನೆಯ ಜನರನ್ನು ಹೇಗೆ ಕೊಲ್ಲಲಾಯಿತು, ಹೇಗೆ ಕೊಲ್ಲಬೇಕು ಎಂಬ ವಿವರಗಳು ಋಗ್ವೇದದಲ್ಲಿವೆ. ಸಿಂಧೂ, ಮೆಹರಗಡದ ಬಯಲು, ಕಣಿವೆಗಳಲ್ಲಿ ವಾತಾವರಣದ, ವಿವಿಧ ಜನ ಸಮೂಹಗಳ ಆಕ್ರಮಣ, ಈಜಿಪ್ಟ್, ಮೆಸಪೊಟೇಮಿಯಾದ ಬಯಲುಗಳಲ್ಲಿನ ಸಂಸ್ಕೃತಿಗಳು ಕುಸಿಯತೊಡಗಿದ್ದು, ಜನಸಂಖ್ಯೆ ಹೆಚ್ಚಾಗಿದ್ದು ಮುಂತಾದ ಹಲವು ರೀತಿಯ ಒತ್ತಡಗಳ ಹಿನ್ನೆಲೆಯಲ್ಲಿ ಈ ಜನರು ನಿಧಾನಕ್ಕೆ ದಕ್ಷಿಣದ ಕಡೆಗೆ ಚಲಿಸಿದ್ದಾರೆ. ಸಿಂಧೂ ಕಣಿವೆಗಳನ್ನು ಬಿಟ್ಟು ದಕ್ಷಿಣಕ್ಕೆ ಬಂದ ಜನರು ನರ್ಮದಾ, ಚಂದ್ರಭಾಗ, ಕೃಷ್ಣ ನದಿ ಬಯಲುಗಳಲ್ಲಿ ನಿಂತು ಅಲ್ಲಿದ್ದ ಜನರೊಂದಿಗೆ ಒಡನಾಡಿ ಕುಂತಳ ದೇಶಗಳನ್ನು ಹಾದು ಮೈಸೂರು ಪ್ರಾಂತಕ್ಕೆ ಬಂದ ಹಾಗೆ ಕಾಣುತ್ತದೆ. ಆರ್ಯ ಭಾಷೆ (ಇರಾನಿನ ಬಯಲುಗಳ) ಪಶುಪಾಲಕರಂತೆ ಉಪಖಂಡದ ಪೂರ್ವಭಾಗಗಳಿಗೆ ಚಲಿಸಬಹುದಾಗಿತ್ತು. ಆದರೆ ಪೂರ್ವಭಾಗದಲ್ಲಿ ನಿಶಾದ, ಶಂಬರ, ಭಿಲ್ಲ, ಮುಂಡ, ನಾಗಾ ಮುಂತಾದ ಆಸ್ಟ್ರೋ ಏಷ್ಯಾಟಿಕ್ ಜನರಿದ್ದಿರಬಹುದು. ಈ ಬುಡಕಟ್ಟುಗಳು ಅತ್ಯಂತ ಉಗ್ರ ಸ್ವರೂಪದವು, ವಾಸ್ತುಶಿಲ್ಪ, ಕೋಟೆಕಟ್ಟುವ ಕಲೆ, ಯುದ್ಧಕಲೆಗಳಲ್ಲಿ ಅಜೇಯರಾಗಿದ್ದ ಕುರಿತು ಮಹಾಭಾರತ ಕೃತಿಯಲ್ಲಿ ಹಲವು ಪ್ರಸ್ತಾಪಗಳಿವೆ. ವಿಖ್ಯಾತ ವಾಸ್ತುಶಿಲ್ಪಿಯಾದ ಮಯನು ಖಾಂಡವದಹನದ ಸಂದರ್ಭದಲ್ಲಿ ಅರಮನೆ ಕಟ್ಟಿಕೊಡುತ್ತೇನೆ, ಶಸ್ತ್ರಾಸ್ತ್ರಗಳನ್ನು ಮಾಡಿಕೊಡುತ್ತೇನೆಂದು ಕೃಷ್ಣ, ಅರ್ಜುನರಲ್ಲಿ ಬೇಡಿಕೊಂಡು ಬದುಕಿಕೊಂಡವನು. ನಂತರ ನೆಲವೋ ನೀರೋ ಎಂಬ ವ್ಯತ್ಯಾಸ ತಿಳಿಯದಷ್ಟು ಅದ್ಭುತವಾದ ಅರಮನೆಯನ್ನು ಪಾಂಡವರಿಗಾಗಿ ನಿರ್ಮಿಸಿಕೊಟ್ಟವನು ಅವನೇ. ಅದಾದ ಮೇಲೆ ಹಲವು ವರ್ಷಗಳ ಕಾಲ ಹಿಮಾಲಯದ ತಪ್ಪಲುಗಳಲ್ಲಿ ಅಲೆದು ಭೀಮನಿಗೆ ಗದೆ ಮುಂತಾದ ಶಸ್ತ್ರಗಳನ್ನು ಮಾಡಿಕೊಟ್ಟ ಕತೆಗಳು ಪ್ರಸ್ತಾಪವಾಗಿವೆ. ಮಯನಿಗಿಂತ ಮೊದಲು ಅರಗಿನ ಅರಮನೆ ಕಟ್ಟಿದ ಪುರೋಚನನೂ ಆರ್ಯೇತರ ಬುಡಕಟ್ಟಿನವನೇ ಆಗಿದ್ದು, ಇಂಥ ಜನರಿದ್ದ ನೆಲದ ಕಡೆಗೆ ಹೋಗುವುದನ್ನು ಬಿಟ್ಟು ತೋಡರ ಆರಂಭ ಕಾಲದ ಮನುಷ್ಯರು ಎಮ್ಮೆಗಳೊಂದಿಗೆ ಮೈಸೂರು ಸೀಮೆಗೆ ಬಂದಹಾಗಿದೆ.

ಪುರಾತತ್ವ ಅಧ್ಯಯನಗಳ ಪ್ರಕಾರ ನೀಲಗಿರಿ ಬೆಟ್ಟಗಳಲ್ಲಿ ಪ್ರಥಮವಾಗಿ ಎರಡು ಬಾರಿ ಬೆಂಕಿ ಬಿದ್ದ ದಾಖಲೆಗಳು ಸಿಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮೊದಲನೆಯದಾಗಿ ಸುಮಾರು 22,000 ವರ್ಷಗಳ ಹಿಂದೆ ಮೊದಲ ಬೆಂಕಿ ಬಿದ್ದಿದೆ. ಅದು ನೈಸರ್ಗಿಕ ಕಾರಣಗಳಿಂದ ಬಿದ್ದಿರಬಹುದು, ಆದರೆ 3,000 ವರ್ಷಗಳ ಹಿಂದೆ ವ್ಯಾಪಕವಾಗಿ ಬೆಂಕಿ ಬಿದ್ದುದರ ಹಿಂದೆ ಮನುಷ್ಯರ ಕೈವಾಡವಿದೆಯೆಂಬ ತೀರ್ಮಾನಕ್ಕೆ ಬರಲಾಗಿದೆ. ತೋಡ, ಬಡಗ, ಕೋಟ, ಚೆಂಚು ಮುಂತಾದವರು ಬಹುಶಃ ಇದೇ ಕಾಲದ ಆಸುಪಾಸಿನಲ್ಲಿ ಶೋಲಾ ಕಾಡುಗಳಿಗೆ ಹತ್ತಿರಬಹುದು. ಒಣಹುಲ್ಲಿಗೆ ಬೆಂಕಿ ಹಚ್ಚಿದರೆ ಮಳೆಗಾಲಕ್ಕೆ ಒಳ್ಳೆಯ ಹುಲ್ಲು ಸಿಗುತ್ತದೆ ಎಂಬ ಉದ್ದೇಶದಿಂದ ಪಶುಪಾಲಕ ಸಮುದಾಯಗಳು ನಿಯಂತ್ರಿತ ಬೆಂಕಿ ಕೊಡುವ ಪದ್ಧತಿಯನ್ನು ಬಹಳ ಹಿಂದಿನಿಂದಲೇ ಅನುಸರಿಸುತ್ತಿದ್ದ ಹಾಗೆ ಕಾಣುತ್ತದೆ. ಈ ಕುರಿತಂತೆ ಥರ್ಸ್ಟನ್ ಕೆಲವು ವಿಚಾರಗಳನ್ನು ಪ್ರಸ್ತಾಪಿಸುತ್ತಾನೆ. 1905 ರ ಆಸುಪಾಸಿನಲ್ಲಿ ಸ್ಥಳೀಯ ಅರಣ್ಯಾಧಿಕಾರಿಗಳು ಅರಣ್ಯಕ್ಕೆ ಬೆಂಕಿಕೊಡುವುದನ್ನು ನಿಷೇಧಿಸಿದಾಗ ತೋಡ ಮುಖಂಡರು ಅದನ್ನು ವಿರೋಧಿಸುತ್ತಾರೆ. ತಮ್ಮ ಹಿರಿಯರ ಕಾಲದಿಂದಲೂ ಬೆಂಕಿ ಕೊಡುತ್ತಾ ಬಂದಿದ್ದೇವೆ, ಹಾಗೆ ಮಾಡಿದರೆ ಹುಲ್ಲು ಹುಲುಸಾಗಿ ಬೆಳೆಯುತ್ತದೆ ಇಲ್ಲದಿದ್ದರೆ ಎಮ್ಮೆಗಳು ಹಸಿವಿನಿಂದ ಸಾಯಬೇಕಾಗುತ್ತದೆ ಎಂಬುದು ಅವರ ವಾದ. ಈ ವಾದವನ್ನು ಕೇಳಿ ಪರಿಶೀಲಿಸಿದ ಬ್ರಿಟಿಷ್ ಅರಣ್ಯಾಧಿಕಾರಿಗಳು ಬೆಂಕಿ ಕೊಡುವುದರಿಂದ ಅರಣ್ಯಕ್ಕೇನೂ ಅಪಾಯವಿಲ್ಲ ಎಂದು ಭಾವಿಸಿ ಅನುಮತಿ ಕೊಟ್ಟಿದ್ದರು ಎಂದು ಥರ್ಸ್ಟನ್ ದಾಖಲಿಸಿದ್ದಾನೆ.

1870 ರಲ್ಲಿ ‘‘ಎಬೊರಿಜಿನಲ್ ಟ್ರೈಬ್ಸ್ ಆಫ್ ನೀಲಗಿರಿ ಹಿಲ್ಸ್’’ ಕೃತಿ ಬರೆದ ಕರ್ನಲ್, ಡಬ್ಲ್ಯು ರಾಸ್ ಕಿಂಗ್ ತೋಡರನ್ನು ಮೂಲನಿವಾಸಿಗಳೆಂದು ಗುರುತಿಸುತ್ತಾನೆ. ಈಗಲೂ ಈ ಅಭಿಪ್ರಾಯ ಹಾಗೆ ಉಳಿದಿದೆ. ಷ.ಶೆಟ್ಟರ್ ಅವರು 6.10.2019 ರಂದು ಪ್ರಜಾವಾಣಿ ಪತ್ರಿಕೆಗೆ ಬರೆದ ಬಹಳ ಮುಖ್ಯ ಒಳನೋಟಗಳುಳ್ಳ ‘ಮಹಿಷ ಮಂಡಲದ ವಾದ ವಿವಾದ; ಪುರಾಣ ಇತಿಹಾಸ ಹೇಳುವುದು ಏನು?’ ಎಂಬ ಬರಹದಲ್ಲಿ ‘ಕ್ರಿಸ್ತಶಕದ ಆರಂಭಕ್ಕಿಂತ ಮುಂಚೆ ನೀಲಗಿರಿ ಬೆಟ್ಟ ಪ್ರದೇಶವು ಮಾಹಿಸಕ ಜನಪದದ ದಕ್ಷಿಣದ ಭಾಗವಾಗಿತ್ತೆಂದಂತಾಯ್ತು. ಇಲ್ಲಿಂದ ಈ ವಲಯವು ಉತ್ತರಕ್ಕೆ ವಿಸ್ತರಿಸಿಕೊಂಡು ಇಂದಿನ ಕೊಪ್ಪಳವನ್ನು ತಲುಪಿತ್ತೆನ್ನಿಸುವುದು. ಅಲ್ಲದೆ ಈ ವಿಶಾಲ ಪ್ರದೇಶದ ನಿವಾಸಿಗಳು ಕಲಬುರ್ಗಿ ಜಿಲ್ಲೆಯ ಬೌದ್ಧ ಕೇಂದ್ರಗಳೊಡನೆ ಗಾಢವಾಗಿ ಗುರುತಿಸಿಕೊಂಡಿದ್ದರು ಎಂಬುದಕ್ಕೆ ತೋಡರನ್ನು ಉಲ್ಲೇಖಿಸುವ ಆರು ಶಾಸನಗಳು ಸಾಕ್ಷಿಯಾಗಿವೆ’’ ಎಂದು ಬರೆದಿದ್ದಾರೆ. ಈ ಅಭಿಪ್ರಾಯದಲ್ಲೂ ಕೂಡ ತೋಡರು ದಕ್ಷಿಣದವರು ಆದರೆ ಉತ್ತರ ಕರ್ನಾಟಕದ ಇಂದಿನ ಬಯಲುಗಳವರೆಗೂ ಅವರು ವ್ಯಾಪಿಸಿಕೊಂಡಿದ್ದರು ಎಂಬ ಧಾಟಿಯಲ್ಲೇ ಷ. ಶೆಟ್ಟರ್ ಅವರು ಬರೆದಿದ್ದಾರೆ. ಆದರೆ ಈ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ತಳಿವಿಜ್ಞಾನ ಹೇಳುತ್ತಿದೆ. ಅದರಂತೆ ತೋಡರು ಉತ್ತರದಿಂದ ದಕ್ಷಿಣಕ್ಕೆ ಬಂದವರು. ನೀಲಗಿರಿಯಲ್ಲಿ ನೆಲೆ ನಿಂತು ಆ ನಂತರ ಉಳಿದ ಪ್ರದೇಶಗಳ ಕಡೆಗೂ ಹೋಗಿ ಬರುತ್ತಿದ್ದಿರಬಹುದು ಅಥವಾ ಬುಡಕಟ್ಟಿನ ಒಂದು ಗುಂಪಿನವರು ಬೆಟ್ಟಗಳಿಗೆ ಬಂದು ಉಳಿದವರು ಕಲ್ಬುರ್ಗಿ ಮುಂತಾದ ಪ್ರದೇಶಗಳ ಬಯಲು ನಾಡುಗಳ ನದಿ ಪಾತ್ರಗಳಲ್ಲಿ ಉಳಿದುಕೊಂಡಿರಬಹುದು. ಎಮ್ಮೆ ಸಾಕುತ್ತಿದ್ದ ಈ ಜನರು ಬೌದ್ಧರಾಗಿ ನಿಧಾನಕ್ಕೆ ಜಾತಿ ಸಮಾಜಗಳು ಆರಂಭವಾದ ಮೇಲೆ ಶೈವರೋ ಅಥವಾ ಮತ್ತಾವುದು ಜಾತಿಯೋ ಆಗಿರಬಹುದಾದ ಸಾಧ್ಯತೆಗಳಿವೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಹಲವು ಭಾಗಗಳಲ್ಲಿ ಎಮ್ಮೆ ದೇವತೆಯಾದ ಪೋತರಾಜು ಪರಂಪರೆ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ. ಪೋತರಾಜು ಎಂಬ ದೇವತೆಯನ್ನು ಕಾಳಿಯ ಸೋದರ ಎಂದು ಗುರುತಿಸಲಾಗುತ್ತದೆ. ಪೂನಾ- ಸೊಲ್ಲಾಪುರದ ಹುಲ್ಲುಗಾವಲುಗಳಲ್ಲಿ ಚಿಂಚಲಿ ಮಾಯರಮ್ಮ ಕೊಂದ ಎಮ್ಮೆ ಕುಲದ ಅಸುರ ರೆಡ್ಡೇಶ್ವರ ಎಂದು ಗುರುತಿಸಲಾಗುತ್ತದೆ. (ಪೋತರಾಜು ಪರಂಪರೆಯವರು ಈಗಲೂ ಮೊಹರಂನ ವೇಷಧಾರಿಗಳಂತೆ ವೇಷ ಹಾಕಿಕೊಂಡು ಕುಣಿಯುತ್ತಾರೆ). ತೆಲಂಗಾಣದಲ್ಲಿ ಮಾಯಿಸಮ್ಮ ದೇವತೆಯ ಆಚರಣೆಗಳಲ್ಲಿ ಪೋತರಾಜುವನ್ನೂ ಪೂಜಿಸಲಾಗುತ್ತದೆಂದು ಸೊಂಥೈಮರ್ ದಾಖಲಿಸಿದ್ದಾನೆ.

 ತಳಿವಿಜ್ಞಾನದ ಪ್ರಮೇಯಗಳ ಪ್ರಕಾರ ಕ್ರಿ.ಶ. ದ ಹೊತ್ತಿಗೆ ಜನರ ಗುಂಪುಗಳು ವಿವಿಧ ಕಾರಣಕ್ಕೆ ರಕ್ತ ಶುದ್ಧತೆ, ಪ್ರತ್ಯೇಕತೆಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಕುರಿತು ಅತ್ಯಂತ ಮಹತ್ವದ ದಾಖಲೆಗಳನ್ನು ನೀಡಿರುವ ಡೇವಿಡ್ ರೈಖ್‌ನ ‘ಹೂ ವಿ ಆರ್ ಅಂಡ್ ಹೌ ವಿ ಗಾಟ್ ಇಯರ್’ ಕೃತಿಯನ್ನು ಗಮನಿಸಬಹುದು. ಹೀಗೆ ಪ್ರತ್ಯೇಕವಾಗುವ ಮೊದಲೇ ಶೈವ ಸಂಸ್ಕೃತಿಯ ಯಾವ ಯಾವುದೋ ಜಾತಿಗಳ ನಡುವೆ ಮಿಶ್ರಣವಾಗಿ ಕರಗಿ ಹೋಗಿರಬಹುದು. ಆದರೆ ದಕ್ಷಿಣದಲ್ಲಿ ಚಿತ್ರದುರ್ಗದ ಗಡಿಗಳಿಂದ ಯಮುನಾ ತೀರದವರೆಗೆ ಮಹಾಭಾರತ ಕೃತಿ ನಿರೂಪಣೆಯ ಕಾಲದಲ್ಲಿ ಹಸುಗಳನ್ನು ಸಾಕುವ ಬುಡಕಟ್ಟುಗಳು, ನಂತರದಲ್ಲಿ ಕುರಿಗಳನ್ನು ಸಾಕುವ ಬುಡಕಟ್ಟುಗಳು ಬಹಳ ಪ್ರಭಾವಯುತವಾಗಿರುವುದನ್ನು ಕಾಣಬಹುದು. ಇದರ ನಡುವೆ ಸಿಂಧು, ನರ್ಮದಾ ಮತ್ತು ಕೃಷ್ಣಾನದಿಯ ದಕ್ಷಿಣ ಭಾಗಗಳಲ್ಲಿ ಎಮ್ಮೆ ಸಾಕುವ ಬುಡಕಟ್ಟುಗಳು ಪ್ರಭಾವಶಾಲಿಯಾಗಿರುವಂತೆ ಕಾಣುತ್ತದೆ. ಸಣ್ಣ ರಾಜರುಗಳಾಗಿ ಆಡಳಿತ ನಡೆಸಿದಂತೆ ಕಾಣುವ ಎಮ್ಮೆ ಸಂಸ್ಕೃತಿಯ ಜನರು ಕಾಲದ ಒತ್ತಡಗಳಿಗೆ ಸಿಲುಕಿ ರಾಕ್ಷಸರು ಎನ್ನಿಸಿಕೊಂಡು ಮರೆಯಾಗಿ ಹೋದದ್ದು ಮಾತ್ರ ಮನುಷ್ಯ ಚರಿತ್ರೆಯ ದುರಂತ ಅಧ್ಯಾಯ.

ಇತಿಹಾಸ, ಪುರಾಣ, ವಿಜ್ಞಾನಗಳ ಜಾಡು ಹಿಡಿದು ನೋಡಿದರೆ ಹಸು ಕುರಿಗಳನ್ನು ಸಾಕುವ ಬುಡಕಟ್ಟುಗಳ ಜನರೂ ಸಹ ಸುಮಾರು 9,500 ವರ್ಷಗಳ ಹಿಂದೆಯೇ ಉಪಖಂಡದಲ್ಲಿ ನೆಲೆಸಿ ಪಶುಪಾಲನೆಗೆ ಹೊಸ ದಿಕ್ಕುಗಳನ್ನು ನೀಡಿದ್ದರು. ಸುಮಾರು 4,000 ವರ್ಷಗಳ ಹಿಂದೆ ಕಾಕಸಸ್ ಬೆಟ್ಟದ ತಪ್ಪಲುಗಳಿಂದ ಇಂದ್ರ ಸಂಸ್ಕೃತಿಯನ್ನು ತಂದ ಪುರುಷಾಧಿಪತ್ಯದ ಅಶ್ವಾರೂಢ ಪಶುಪಾಲಕರು ಹಲವು ರೀತಿಯ ಸಂಘರ್ಷಗಳನ್ನು ಮಾಡಿದರು. ತಮ್ಮ ನೆನಪುಗಳನ್ನು ಹಾಡಲಾರಂಭಿಸಿದರು. ತಮ್ಮ ಶ್ರೇಷ್ಠತೆಯನ್ನು ಹೊಗಳಿಕೊಂಡರು. ಕಪ್ಪು ವರ್ಣವನ್ನು ಅವಮಾನಿಸಿದರು. ನಗರ, ಕೋಟೆ, ಕೊತ್ತಲಗಳನ್ನು, ಅಣೆಕಟ್ಟೆಗಳನ್ನು ಅಳಿಸಿಹಾಕಿದರು. ಇಲ್ಲಿನ ಹೆಂಗಸರೊಡನೆ ಕೂಡಿ ಹೊಸ ಸಂತತಿಯ ಹುಟ್ಟಿಗೆ ಕಾರಣರಾದರು. ಕೃಷಿ ಮಾಡಿದರು. ಸಂಪತ್ತು ಶೇಖರಣೆಗೊಂಡಿತು. ಸಾಮ್ರಾಜ್ಯಗಳನ್ನು ಕಟ್ಟಲಾರಂಭಿಸಿದರು. ಶತ್ರುಗಳನ್ನು ಅಸುರ, ದಾಸ, ರಾಕ್ಷಸರೆಂದು ಕರೆದರು (ಹಾಗೆ ನೋಡಿದರೆ ಅಸುರ, ದಾಸರು, ದಸ್ಯುಗಳು, ಪಣಿಗಳು ಮುಂತಾದವರು ಪಾರ್ಥಿಯನ್ ಎಂಬ ಬೃಹತ್ ಸಾಮ್ರಾಜ್ಯವನ್ನು ಕಟ್ಟಿ ಆಳಿದ್ದಾರೆ. ಉತ್ತರ ಅಫ್ಘಾನಿಸ್ತಾನದ ಬಯಲುಗಳಿಂದ ಹಿಡಿದು ಉಕ್ರೇನಿನವರೆಗೆ ವ್ಯಾಪಿಸಿದ್ದ ಸಾಮ್ರಾಜ್ಯ ಅದು. ವೇದಗಳ ಜನರು ಇವರೊಂದಿಗೆ ಮುಖಾಮುಖಿಯಾಗಿ ಋಕ್ಕುಗಳನ್ನು, ಅವೆಸ್ತಾದಲ್ಲಿ ಗಾಥಾಗಳನ್ನು ರಚಿಸಿದ್ದಾರೆ). ಈ ಸ್ಟೆಪ್ಪಿ ಪಶುಪಾಲಕರು ಸ್ಥಳೀಯರೊಂದಿಗೆ ಬೆರೆತರು. ನಂತರ ಪ್ರತ್ಯೇಕತೆಯನ್ನು ಪ್ರತಿಪಾದಿಸಿ ಜಾತಿಗಳ ಹುಟ್ಟಿಗೆ ಕಾರಣರಾದರು. ಈ ಹಿಂಸಾತ್ಮಕ ಸಂಘರ್ಷದ ಯಾನದಲ್ಲಿ ತೋಡರು ದಕ್ಷಿಣದ ತುದಿಗೆ ಬಂದು ಬೆಟ್ಟವೇರಿ ಕುಳಿತರು. ಹಸಿವು, ಬಡತನ, ರೋಗ, ರುಜಿನಗಳಿಗೆ ತುತ್ತಾಗಿ ಇಂದು ಕೇವಲ 2-3 ಸಾವಿರ ಜನ ಮಾತ್ರ ಉಳಿದುಕೊಂಡಿದ್ದಾರೆ. ಪರ್ಶಿಯಾದ ಬಯಲುಗಳ ಅಹುರ ಮಜ್ದಾನನ್ನು ನೆನಪಿಸುವ ರಾವಣ, ಮಹಿಷಾಸುರರು ದುಷ್ಟ ಸಂಕೇತಗಳಾಗಿ ನಿಂತಿದ್ದಾರೆ.

(ಮುಂದುವರಿಯುವುದು)

share
ಡಾ.ನೆಲ್ಲುಕುಂಟೆ ವೆಂಕಟೇಶ್
ಡಾ.ನೆಲ್ಲುಕುಂಟೆ ವೆಂಕಟೇಶ್
Next Story
X