ಲಷ್ಕರ್ ಕಮಾಂಡರ್ ನದೀಮ್ ಅಕ್ಬರ್ ಎನ್ಕೌಂಟರ್

ಸಾಂದರ್ಭಿಕ ಚಿತ್ರ
ಶ್ರೀನಗರ, ಜೂ.29: ಪಾಕಿಸ್ತಾನಿ ಉಗ್ರ ಹಾಗೂ ಲಷ್ಕರ್ ಇ ತೈಬಾ (ಎಇಟಿ)ದ ಅಗ್ರ ಕಮಾಂಡರ್ ನದೀಮ್ ಅಕ್ಬರ್ನನ್ನು ಸೋಮವಾರ ಮುಂಜಾನೆ ಭದ್ರತಾ ಪಡೆಗಳು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿವೆ.
ಶ್ರೀನಗರದ ಮಲೂರಾ ಪರಿಂಪೋರಾದಲ್ಲಿ ಈ ಗುಂಡಿನ ಕಾಳಗ ನಡೆದಿದೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ವ್ಯಾಪಕ ಶಸ್ತ್ರಾಸ್ತ್ರಗಳನ್ನೂ ಈ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಅಕ್ಬರ್ ಇತ್ತೀಚೆಗೆ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕ ಮೇಲೆ ನಡೆದ ಹಲವು ದಾಳಿಗಳಲ್ಲಿ ಶಾಮೀಲಾಗಿದ್ದ ಎನ್ನಲಾಗಿದೆ. ಈತನನ್ನು ನಿನ್ನೆ ಸಂಜೆ ಬಂಧಿಸಲಾಗಿತ್ತು. ಇದನು ದೊಡ್ಡ ಯಸಸ್ಸು ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದರು.
ಬಳಿಕ ಆತ ಭದ್ರತಾ ಪಡೆಯ ಸಿಬ್ಬಂದಿಗೆ ತನ್ನ ಅಡಗುತಾಣ ತೋರಿಸಲು ಕರೆದೊಯ್ಯುತ್ತಿದ್ದಾಗ ಆತನ ಕಡೆಯವರು ಭದ್ರತಾ ಪಡೆ ಗುಂಪಿನ ಮೇಲೆ ಗುಂಡು ಹಾರಿಸಿದರು. ಘಟನೆಯಲ್ಲಿ ಮೂವರು ಮಂದಿ ಸಿಆರ್ಪಿಎಫ್ ಯೋದರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸಿಆರ್ಪಿಎಫ್ನ ಉಪ ಅಧೀಕ್ಷಕ ಮತ್ತು ಅರೆಮಿಲಿಟರಿ ಪಡೆಯ ಒಬ್ಬ ಕಾನ್ಸ್ಟೇಬಲ್ ಗುಂಡಿನ ಕಾಳಗದಲ್ಲಿ ಗಾಯಗೊಂಡರು. ಇದು ಭದ್ರತಾ ಪಡೆ ಯೋಧರು ಮತ್ತು ಉಗ್ರರ ನಡುವಿನ ಎನ್ಕೌಂಟರ್ಗೆ ಕಾರಣವಾಯಿತು. ಅಂತಿಮವಾಗಿ ಎನ್ಕೌಂಟರ್ನಲ್ಲಿ ಎಲ್ಇಟಿ ಕಮಾಂಡರ್ ಅಕ್ಬರ್ ಹತನಾದ ಎಂದು ಪೊಲೀಸ್ ಮೂಲಗಳು ಹೇಳಿವೆ







