ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನಿಂದ ‘ಮೂಕಜ್ಜಿ ಕನಸುಗಳು’ ಸಿನಿಮಾ ವಿಮರ್ಶಾ ಸ್ಪರ್ಧೆ
ಉಡುಪಿ, ಜೂ.29: ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ‘ಮೂಕಜ್ಜಿಯ ಕನಸುಗಳು’ ಕನ್ನಡ ಚಲನಚಿತ್ರದ ವಿಮರ್ಶಾ ಸ್ಪರ್ಧೆಯೊಂದನ್ನು ಆಯೋಜಿಸಿದೆ.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸ್ನಾತಕೋತ್ತರ, ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಪಿ.ಶೇಷಾದ್ರಿ ನಿರ್ದೇಶನದ ಈ ಚಿತ್ರ ಯೂಟ್ಯೂಬ್‌ನಲ್ಲಿ ನೋಡಲು ಲಭ್ಯವಿದೆ.
ವಿಮರ್ಶೆ ಪುಲ್‌ಸ್ಕೇಪ್ ಕಾಗದದಲ್ಲಿ ಕನಿಷ್ಠ ನಾಲ್ಕು ಪುಟದಿಂದ ಗರಿಷ್ಠ ಎಂಟು ಪುಟಗಳವರೆಗೆ ಇರಬಹುದು. ವಿಮರ್ಶೆಯನ್ನು ಕೈಬರಹದಲ್ಲಿ ಅಥವಾ ಡಿಟಿಪಿ ಮಾಡಿ ಅಂಚೆ ಮೂಲಕ ಕಳುಹಿಸಬಹುದು. ವಿಮರ್ಶೆಯ ಜೊತೆಗೆ ವಿದ್ಯಾರ್ಥಿಯ ಮನೆ ವಿಳಾಸ, ಕಾಲೇಜು ಐಡಿ ಕಾರ್ಡ್‌ನ ಪ್ರತಿ, ಮೊಬೈಲ್ ನಂಬರ್ ಕಳುಹಿಸಬೇಕು.
ವಿಜೇತರಿಗೆ ಪ್ರಥಮ ಬಹುಮಾನ 2,000ರೂ., ದ್ವಿತೀಯ 1,500ರೂ. ಹಾಗೂ ತೃತೀಯ ಬಹುಮಾನ 1,000ರೂ.ನೀಡಲಾಗುತ್ತದೆ. ಸಿನಿಮಾ ವಿಮರ್ಶೆಯ ಮಾದರಿಗಾಗಿ ವಿದ್ಯಾರ್ಥಿಗಳು ಕೆ.ವಿ.ಸುಬ್ಬಣ್ಣ, ಮನು ಚಕ್ರವರ್ತಿ, ಕೆ.ಣಿರಾಜ್ ಇವರ ಲೇಖನಗಳನ್ನು ಓದಬಹುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಮರ್ಶೆಯನ್ನು ಆಗಸ್ಟ್15ರೊಳಗೆ ಕಳುಹಿಸಿಕೊಡಬೇಕು. ವಿಮರ್ಶೆಗಳನ್ನು ಕಳುಹಿಸಬೇಕಾದ ವಿಳಾಸ: ಪ್ರೊ.ಮುರಳೀಧರ ಉಪಾಧ್ಯ, ‘ಸಖಿಗೀತ’, ಎಂಐಜಿ 1, ಹುಡ್ಕೋ ಸ್ಟ್‌ಮೈನ್, ದೊಡ್ಡಣಗುಡ್ಡೆ, ಉಡುಪಿ- 576102. ಮೊಬೈಲ್-ವಾಟ್ಸಪ್ ನಂ.:9448215779. ಈಮೈಲ್: samskruthisiritrust@gmail.com..







