ಶೇಖರ ಪೂಜಾರಿ

ಉಡುಪಿ, ಜೂ.29: ಕಾಂಗ್ರೆಸ್ ಕಾರ್ಯಕರ್ತ, ಉಡುಪಿಯ ನಿಟ್ಟೂರು- ಕೊಡಂಕೂರು ನಿವಾಸಿ ಶೇಖರ ಪೂಜಾರಿ(63) ಜೂ.29ರಂದು ಮುಂಜಾನೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದರು.
ಈ ಹಿಂದೆ ಕೆಎಂಸಿ ಉದ್ಯೋಗಿಯಾಗಿದ್ದ ಇವರು, ನಂತರ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರ ಕಚೇರಿಯಲ್ಲಿ ಕೂಡ ಕೆಲಸ ನಿರ್ವಹಿಸಿದ್ದರು.
ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಾಜಿ ಸಚಿವ ರಾದ ವಿನಯಕುಮಾರ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಾದ ಯು.ಆರ್.ಸಭಾಪತಿ, ಗೋಪಾಲ್ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





