ಉಡುಪಿ ಹೋಬಳಿ ಫ್ಲೈಯಿಂಗ್ ಸ್ಕ್ವಾಡ್‌ನಲ್ಲಿ ಬದಲಾವಣೆ
ಉಡುಪಿ, ಜೂ.29: ಸರಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸುವ ಸಲುವಾಗಿ ಉಡುಪಿ ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಕಿದಿಯೂರು, ಅಂಬಲಪಾಡಿ, ಮೂಡನಿಡಂಬೂರು (ನಗರಸಭಾ ವ್ಯಾಪ್ತಿ ಹೊರತು ಪಡಿಸಿ) ತೆಂಕನಿಡಿಯೂರು, ಕೆಳಾರ್ಕಳಬೆಟ್ಟು, ಬಡಾನಿಡಿಯೂರು, ಮೂಡುತೋನ್ಸೆ, ಪಡುತೋನ್ಸೆ ವ್ಯಾಪ್ತಿಗೆ ನೇಮಿಸಲಾದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜಿ.ಎಂ.ಶಿವಕುಮಾರ್ ಇವರನ್ನು ಬದಲಾವಣೆ ಮಾಡಿ, ನಗರದ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ (ಮೊ.ನಂ: 9731860832) ಇವರನ್ನು ನೇಮಕ ಮಾಡಿ, ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
Next Story





