ಮಣೂರು ಕಾಲೇಜಿನಲ್ಲಿ ಕೊರೋನ ಲಸಿಕಾ ಅಭಿಯಾನ

ಕೋಟ: ಮಣೂರು ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಅಭಿಯಾನ ಹಾಗೂ ಕಂಪ್ಯೂಟರ್ ಕಚೇರಿ ಉದ್ಘಾಟನೆ ಕಾರ್ಯಕ್ರಮವು ಮಂಗಳವಾರ ಜರಗಿತು.
ಕಂಪ್ಯೂಟರ್ ಕಚೇರಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಲಸಿಕಾ ಅಭಿಯಾನವನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ.ಗಾಂವ್ಕರ್, ವಿದ್ಯಾರ್ಥಿ ಕ್ಷೇಮಪಾಲ ನಾಧಿಕಾರಿ ನಾಗರಾಜ್ ವೈದ್ಯ, ನೋಡಲ್ ಅಧಿಕಾರಿ ಡಾ. ಮನೋಜ್ ಕುಮಾರ್, ಗ್ರಂಥಪಾಲಕರು ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
Next Story





