ಆದೇಶ ಅನ್ವಯಿಸಲ್ಲ ಎಂದಿದ್ದ ಸಿಬಿಎಸ್‍ಇ, ಐಸಿಎಸ್‍ಇ ಸ್ಕೂಲ್ ಅಸೋಸಿಯೇಷನ್‍ಗೆ ಹೈಕೋರ್ಟ್ ತುರ್ತು ನೋಟಿಸ್
ಶೇ.30ರಷ್ಟು ಶುಲ್ಕ ಕಡಿತ ವಿಚಾರ

ಬೆಂಗಳೂರು, ಜೂ.29: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶೇ.30ರಷ್ಟು ಶುಲ್ಕ ಕಡಿತ ಮಾಡಿರುವ ಆದೇಶ ನಮಗೆ ಅನ್ವಯ ಆಗುವುದಿಲ್ಲ ಎಂದಿದ್ದ ಸಿಬಿಎಸ್‍ಇ, ಐಸಿಎಸ್‍ಇ ಸ್ಕೂಲ್ ಅಸೋಸಿಯೇಷನ್‍ಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ಶುಲ್ಕ ಕಡಿತಕ್ಕೆ ಸಂಬಂಧಿಸಿದಂತೆ ಆದೇಶ ಪಾಲಿಸಲು ರಾಜ್ಯ ಸರಕಾರದ ಅಡಿಯಲ್ಲಿ ಬರುವುದಿಲ್ಲ ಎಂದು ಸಿಬಿಎಸ್‍ಇ, ಐಸಿಎಸ್‍ಇ ಸ್ಕೂಲ್ ಅಸೋಸಿಯೇಷನ್ ಹೇಳಿಕೆ ನೀಡಿರುವುದನ್ನು ಪ್ರಶ್ನಿಸಿ ವಕೀಲ ನಟರಾಜ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅಸೋಸಿಯೇಷನ್‍ಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರೂ ಆಗಿರುವ ವಕೀಲ ನಟರಾಜ್ ಶರ್ಮಾ ಅವರು ವಾದಿಸಿ, ಸಿಬಿಎಸ್‍ಇ, ಐಸಿಎಸ್‍ಇ ಸ್ಕೂಲ್‍ನವರು ಕೇಂದ್ರದ ಮಂಡಳಿಯಿಂದ ಅನುಮತಿ ಪಡೆದಿರಬಹುದು. ಆದರೆ, ರಾಜ್ಯ ಸರಕಾರದಿಂದ ಶಾಲೆ ನಡೆಸಲು ಎನ್‍ಓಸಿ ಪಡೆದಿದ್ದಾರೆ. ಹೀಗಾಗಿ, ಎಲ್ಲ ಸಿಬಿಎಸ್‍ಇ, ಐಸಿಎಸ್‍ಇ ಸ್ಕೂಲ್‍ಗಳು ಆದೇಶ ಪಾಲಿಸಬೇಕು. ಎನ್‍ಡಿಎಂಎ ಕಾಯ್ದೆ ಅಡಿಯಲ್ಲಿ ತುರ್ತು ಬಂದಾಗ ನಿಯಮಗಳನ್ನು ಪಾಲಿಸಬೇಕು ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.







