ಕಾರ್ಕಳ: ವಿದ್ಯುತ್ ಸೌಲಭ್ಯ ವಂಚಿತ ವಿದ್ಯಾರ್ಥಿಗೆ ಸೋಲಾರ್ ಲ್ಯಾಂಪ್ ನೀಡಿದ ಡಿಡಿಪಿಐ

ಕಾರ್ಕಳ, ಜೂ.29: ವಿದ್ಯುತ್ ಸೌಲಭ್ಯ ವಂಚಿತ, ಅತ್ಯಂತ ಕಡು ಬಡತನದಲ್ಲಿ ರುವ ರೆಂಜಾಳ ಸರಕಾರಿ ಪ್ರೌಢಶಾಲೆಯ 10ನೆ ತರಗತಿ ವಿದ್ಯಾರ್ಥಿನಿ ಪುಷ್ಪಎಂಬವರ ಮನೆಗೆ ಇಂದು ಭೇಟಿ ನೀಡಿದ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಎನ್.ಎಚ್. ನಾಗೂರ, ವಿದ್ಯಾರ್ಥಿಯ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಸೋಲಾರ್ ಲ್ಯಾಂಪ್ ಅನ್ನು ನೀಡಿದರು.
ಇದೇ ಸಂದರ್ಭದಲ್ಲಿ ಎನ್.ಎಚ್‌ನಾಗೂರ ರೆಂಜಾಳ ಪ್ರೌಢಶಾಲೆಗೆ ಭೇಟಿ ನೀಡಿ ಸಮಾಜ ವಿಜ್ಞಾನ ಡಿಜಿಟಲ್ ಲ್ಯಾಬ್ ನ್ನು ವೀಕ್ಷಿಸಿದರು. ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಜಾನ್ಹವಿ ಸಿ., ಶಾಲಾ ಸಮಾಜ ವಿಜ್ಞಾನ ಶಿಕ್ಷಕ ವಿನಾಯಕ ನಾಯ್ಕ ಹಾಗೂ ಜೀವ ವಿಜ್ಞಾನ ಶಿಕ್ಷಕ ಸುನಿಲ್, ಕನ್ನಡ ಭಾಷಾ ಶಿಕ್ಷಕ ಮಂಜು ನಾಥ್ ಕುಲಾಲ್ ಉಪಸ್ಥಿತರಿದ್ದರು.
Next Story





