ಸೋಮವಾರಪೇಟೆ: ವನ್ಯಜೀವಿ ದಾಳಿಗೆ ವ್ಯಕ್ತಿ ಬಲಿ; ಕಾಡುಹಂದಿ ದಾಳಿ ಶಂಕೆ

ಮಡಿಕೇರಿ, ಜೂ.29: ವನ್ಯಜೀವಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ಕೃಷಿಕ ಎಸ್.ಪಿ.ಕುಶಾಲಪ್ಪ ಎಂಬುವವರೇ ಮೃತ ವ್ಯಕ್ತಿ. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಪ್ರಾಣಿ ದಾಳಿ ಮಾಡಿದ್ದು, ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ಕುಶಾಲಪ್ಪ ಅವರು ಇನ್ನೂ ಬಾರಲಿಲ್ಲವೆಂದು ತೋಟಕ್ಕೆ ಹುಡುಕಿಕೊಂಡು ಬಂದ ಮನೆಯವರಿಗೆ ಮೃತದೇಹ ಪತ್ತೆಯಾಗಿದೆ.
ಸ್ಥಳದಲ್ಲಿ ಕಾಡುಹಂದಿಯ ಹೆಜ್ಜೆ ಗುರುತುಗಳಿದ್ದು, ಇದರ ದಾಳಿಯಿಂದಲೇ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಮೃತ ಕುಶಾಲಪ್ಪ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Next Story





