ನಾವು ಸಂಯಮ ಕಾಪಾಡಿಕೊಂಡಿದ್ದೇವೆ, ಆದರೆ ಮಿತಿ ದಾಟಬೇಡಿ: ರೈತರಿಗೆ ಹರ್ಯಾಣ ಮುಖ್ಯಮಂತ್ರಿ ಎಚ್ಚರಿಕೆ

ಚಂಡೀಗಡ: ರಾಜಕೀಯ ನಾಯಕರು ಪ್ರತಿಭಟನೆಗಳ ನಡುವೆಯೂ ತಾಳ್ಮೆಯಿಂದಿರುತ್ತಾರೆ. ಆದರೆ "ಯಾರೊಬ್ಬರೂ ತಮ್ಮ ಮಿತಿಯನ್ನು ಮೀರುವುದು ಒಳ್ಳೆಯದಲ್ಲ" ಎಂದು ಮೂರು ಕೇಂದ್ರ ಕೃಷಿ ಕಾನೂನುಗಳ ಕುರಿತಾಗಿ ರೈತರ ಪ್ರತಿರೋಧವನ್ನು ಎದುರಿಸುತ್ತಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ಹೇಳಿದರು.
ಘಾಜಿಪುರದ ಉತ್ತರ ಪ್ರದೇಶ-ದಿಲ್ಲಿ ಗಡಿಯಲ್ಲಿ ಬೀಡುಬಿಟ್ಟಿರುವ ಕೃಷಿ ವಿರೋಧಿ ಕಾನೂನು ಪ್ರತಿಭಟನಕಾರರು ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ಇಂದು ಘರ್ಷಣೆ ನಡೆದ ನಂತರ ಈ ಎಚ್ಚರಿಕೆ ನೀಡಲಾಗಿದೆ.
"ಕಿಸಾನ್ (ರೈತ) ಎಂಬ ಪದವು ಶುದ್ಧವಾಗಿದೆ ಹಾಗೂ ಎಲ್ಲರೂ ಅವರನ್ನು ಗೌರವದಿಂದ ಕಾಣುತ್ತಾರೆ. ಕೆಲವು ದುರದೃಷ್ಟಕರ ಘಟನೆಗಳಿಂದಾಗಿ ಈ ಪದವು ಕಳಂಕಿತವಾಗಿದೆ. ಸಹೋದರಿಯರು ಹಾಗೂ ಹೆಣ್ಣುಮಕ್ಕಳ ಘನತೆಯನ್ನು ಕಸಿದುಕೊಳ್ಳಲಾಗಿದೆ. ಕೊಲೆಗಳು ನಡೆಯುತ್ತಿವೆ, ರಸ್ತೆ ತಡೆ ನಡೆಸಲಾಗುತ್ತಿದೆ. ನಾನು ಇಂತಹ ಘಟನೆ ಖಂಡಿಸುತ್ತೇನೆ. ಇದು ಪ್ರಜಾಪ್ರಭುತ್ವ ವಿರೋಧಿ ಘಟನೆಗಳು" ಎಂದು ಖಟ್ಟರ್ ಹೇಳಿದರು.
Next Story





