ಸಾಲ ನೀಡಿಕೆಯಲ್ಲಿ ಬ್ಯಾಂಕ್‌ಗಳ ಕಳಪೆ ಸಾಧನೆ: ಸಿಇಒ ಅಸಮಾಧಾನ
ಸಾಲ ಮೇಳ ನಡೆಸಲು ಉಡುಪಿ ಜಿಲ್ಲೆಯ ಬ್ಯಾಂಕುಗಳಿಗೆ ಕರೆ

ಉಡುಪಿ, ಜೂ.30:ಜಿಲ್ಲೆಯ ಬ್ಯಾಂಕುಗಳು ಜನರಿಗೆ ಸಾಲ ನೀಡಿಕೆಯಲ್ಲಿ ತೀರಾ ಕಳಪೆ ಸಾಧನೆ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪ ಡಿಸಿದ ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ., ಇದಕ್ಕೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲೇ ದೋಷವಿರಬೇಕು. ಬಡವರನ್ನು, ಹಣದ ಅಗತ್ಯವಿದ್ದವರನ್ನು ಬ್ಯಾಂಕಿನ ಬಳಿ ಸೆಳೆಯಲು ಸಾಲ ಮೇಳಗಳನ್ನು ಆಯೋಜಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಮಣಿಪಾಲದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ 2020-21ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಉಡುಪಿ ಜಿಲ್ಲೆಯ ಬ್ಯಾಂಕ್ ವ್ಯವಹಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಣಿಪಾಲದ ಜಿಪಂ ಸಾಂಗಣದಲ್ಲಿಬುವಾರ ನಡೆದ 2020-21ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಉಡುಪಿ ಜಿಲ್ಲೆಯ ಬ್ಯಾಂಕ್ ವ್ಯವಹಾರದ ಪ್ರಗತಿ ಪರಿಶೀಲನಾ ಸೆಯಅ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಇದೇ ಜನವರಿ 1ರಿಂದ ಮಾ.31ರವರೆಗೆ ಜಿಲ್ಲೆಯ ಬ್ಯಾಂಕುಗಳು ಒಟ್ಟು 908 ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಿದ್ದರೆ, ಇದೇ ಅವಧಿಯಲ್ಲಿ ನೀಡಿರುವ ಸಾಲ ಕೇವಲ 59 ಕೋಟಿ ರೂ. ಇದರಿಂದ ಮೂರು ತಿಂಗಳ ಅವಧಿಯಲ್ಲಿ ಠೇವಣಿಯಲ್ಲಿ ಶೇ.3.24 ಹಾಗೂ ಸಾಲದಲ್ಲಿ ಶೇ.0.45ರ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ದಲ್ಲಿ ಜಿಲ್ಲೆಯ ಬ್ಯಾಂಕುಗಳ ಸಾಧನೆಯ ವಿವರಗಳನ್ನು ನೀಡಿದ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಚೀಫ್ ಮ್ಯಾನೇಜರ್ ರುದ್ರೇಶ್ ಡಿ.ಸಿ. ಸಭೆಗೆ ತಿಳಿಸಿದರು.
ಇದರಿಂದ ಜಿಲ್ಲೆಯ ಸಾಲ-ಠೇವಣಿ (ಸಿ.ಡಿ.) ಅನುಪಾತ ಶೇ.45.17 ಆಗಿದ್ದು, ಇದು ಕಳೆದ ತ್ರೈಮಾಸಿಕಕ್ಕಿಂತ (46.42) ಶೇ.1.25ರಷ್ಟು ಕುಸಿದಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ (ಶೇ.47.46) ಶೇ.2.29ರಷ್ಟು ಕುಸಿದಿದೆ ಎಂದು ರುದ್ರೇಶ್ ವಿವರಿಸಿದರು.
ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಈ ಕಳಪೆ ಸಾಧನೆಗೆ ತೀವ್ರವಾದ ಅಸಮಧಾನ ವನ್ನು ವ್ಯಕ್ತಪಡಿಸಿದ ಡಾ.ನವೀನ್ ಭಟ್, ಬ್ಯಾಂಕ್‌ಗಳು ಕೇವಲ ಠೇವಣಿಯನ್ನು ಸಂಗ್ರಹಿಸುವುದಷ್ಟೇ ತಮ್ಮ ಕರ್ತವ್ಯ ಎಂದು ಭಾವಿಸಿದಂತಿದೆ. ಕೊರೋನದಂಥ ವಿಷಮ ಪರಿಸ್ಥಿತಿಯಲ್ಲೂ ಜನರು ಬ್ಯಾಂಕುಗಳ ಬಳಿ ಸಾಲಕ್ಕೆ ಬರುವುದಿಲ್ಲ ಎಂದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲೇ ಏನೋ ದೋಷವಿರಬೇಕು. ಅಥವಾ ಜನರು ಬ್ಯಾಂಕಿಗೆ ಬರಲು ಹೆದರುತ್ತಿರಬೇಕು ಎಂದರು.
ಜಿಲ್ಲೆಯಲ್ಲಿ ಅಧಿಕ ಶಾಖೆಗಳನ್ನು ಹೊಂದಿರುವ ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಎಸ್‌ಬಿಐಗಳ ಸಿಡಿ ರೇಷಿಯೊ ಯಾಕೆ ಕಳಪೆಯಾಗಿದೆ. ಯಾಕೆ ಅವುಗಳು ಸಿ.ಡಿ.ಅನುಪಾತದಲ್ಲಿ ಪ್ರಗತಿ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದ ಡಾ.ಭಟ್, ಜನರನ್ನು ಮತ್ತೆ ಬ್ಯಾಂಕುಗಳ ಬಳಿ ಆಕರ್ಷಿಸಲು ಸಾಲ ಮೇಳದಂಥ ಯೋಜನೆಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು.
ಸಾಲಕ್ಕೆ ಆದ್ಯತೆ ನೀಡಿ: ವಿದ್ಯಾರ್ಥಿಗಳಿಗೆ ವಿದ್ಯಾಸಾಲ ಹಾಗೂ ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡು ವಲ್ಲಿ ಬ್ಯಾಂಕುಗಳು ತೋರುವ ನಿರಾಸಕ್ತಿಯನ್ನು ಖಂಡಿಸಿ, ವಿವಿಧ ಯೋಜನೆಗಳಡಿ ಜಿಲ್ಲೆಯ ಜನರ ಅರ್ಜಿಗಳನ್ನು ಉಪೇಕ್ಷಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಬ್ಯಾಂಕ್ ಶಾಖೆಗಳ ಮ್ಯಾನೇಜರ್‌ಗಳಿಗೆ ಎಚ್ಚರಿಕೆ ರವಾನಿಸಿದರು.
ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿ ಅನುಪಾತ ಶೇ.60ರಷ್ಟಿರಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿ ಇದು ಒಂದು ತ್ರೈಮಾಸಿಕದಿಂದ ಮತ್ತೊಂದರಲ್ಲಿ ಕೆಳಗಿಳಿಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.2.29ರಷ್ಟು ಕುಸಿದಿದೆ. ಬ್ಯಾಂಕುಗಳನ್ನು ಇದನ್ನು ಸುಧಾರಿಸಿಕೊಳ್ಳಲೇಬೇಕು ಎಂದು ಡಾ.ಭಟ್ ನುಡಿದರು.
ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿ ಅನುಪಾತ ಶೇ.60ರಷ್ಟಿರಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿ ಇದು ಒಂದು ತ್ರೈಮಾಸಿಕದಿಂದ ಮತ್ತೊಂದರಲ್ಲಿ ಕೆಳಗಿಳಿಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.2.29ರಷ್ಟು ಕುಸಿದಿದೆ. ಬ್ಯಾಂಕುಗಳನ್ನು ಇದನ್ನು ಸುಾರಿಸಿಕೊಳ್ಳಲೇಬೇಕುಎಂದುಡಾ.ಟ್ ನುಡಿದರು. ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ಠೇವಣಿ ಮೊತ್ತವು 2021ರ ಮಾರ್ಚ್ ಅಂತ್ಯದ ವೇಳೆಗೆ 28,950 ಕೋಟಿರೂ.ಗೆ ಏರಿಕೆಯಾಗಿದ್ದು, ಶೇ.12.87ರ ಪ್ರಗತಿ ದಾಖಲಿಸಲಾಗಿದೆ. ಅದೇ ರೀತಿ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್‌ಗಳು ಒಟ್ಟು 13,077 ಕೋಟಿ ರೂ. ಸಾಲ ನೀಡಿದ್ದು, ಇದರ ವಾರ್ಷಿಕ ಪ್ರಗತಿ ಶೇ.7.42 ಆಗಿದೆ. ಇದರಿಂದ ಕಳೆದ ಅವಧಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿಯ ಅನುಪಾತ ಶೇ.45.17 ಆಗಿದೆ ಎಂದು ರುದ್ರೇಶ್ ತಿಳಿಸಿದರು.
ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ಠೇವಣಿ ಮೊತ್ತವು 2021ರ ಮಾರ್ಚ್ ಅಂತ್ಯದ ವೇಳೆಗೆ 28,950 ಕೋಟಿರೂ.ಗೆ ಏರಿಕೆಯಾಗಿದ್ದು, ಶೇ.12.87ರ ಪ್ರಗತಿ ದಾಖಲಿಸಲಾಗಿದೆ. ಅದೇ ರೀತಿ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್‌ಗಳು ಒಟ್ಟು 13,077 ಕೋಟಿ ರೂ. ಸಾಲ ನೀಡಿದ್ದು, ಇದರ ವಾರ್ಷಿಕ ಪ್ರಗತಿ ಶೇ.7.42 ಆಗಿದೆ. ಇದರಿಂದ ಕಳೆದ ಅವಧಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿಯ ಅನುಪಾತ ಶೇ.45.17 ಆಗಿದೆ ಎಂದು ರುದ್ರೇಶ್ ತಿಳಿಸಿದರು. 2020-21ನೇ ಸಾಲಿನಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ಈ ಅವಧಿಯ ಒಟ್ಟು ಸಾಲದ ಗುರಿಯಾದ 9602 ಕೋಟಿ ರೂ.ಗಳಲ್ಲಿ 8693 ಕೋಟಿ ರೂ. ಸಾಲವನ್ನು ನೀಡುವ ಮೂಲಕ ಶೇ.91ರಷ್ಟು ಸಾಧನೆ ಮಾಡಿವೆ. ಈ ಸಾಲದಲ್ಲಿ ಕೃಷಿ ಕ್ಷೇತ್ರಗಳಿಗೆ 4164 ಕೋಟಿ ರೂ., ಅತೀ ಸಣ್ಣ, ಕಿರು ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ 2483 ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ 122 ಕೋಟಿ ರೂ. ಹಾಗೂ 542 ಕೋಟಿ ರೂ.ಗಳನ್ನು ಗೃಹ ಸಾಲವಾಗಿ ನೀಡಲಾಗಿದೆ. ಈ ಮೂಲಕ ಆದ್ಯತಾ ಕ್ಷೇತ್ರಕ್ಕೆ ಇದ್ದ ಗುರಿಯಾದ 8350 ಕೋಟಿ ರೂ.ಗಳಲ್ಲಿ 7554 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ವಿತರಿಸಿ ಶೇ.90ರ ಸಾಧನೆ ಮಾಡಲಾಗಿದೆ. ಅದೇ ರೀತಿ ಆದ್ಯತೇತರ ಕ್ಷೇತ್ರದಲ್ಲಿ ಅವಧಿಯ ಗುರಿಯಾದ 1250 ಕೋಟಿ ರೂ.ಗಳಲ್ಲಿ 1138 ಕೋಟಿ ರೂ.ಗಳ ಸಾಲ ವಿತರಣೆ ಮಾಡಿ ಶೇ.91ರ ಗುರಿ ಸಾಧನೆ ಮಾಡಲಾಗಿದೆ ಎಂದವರು ವಿವರಿಸಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು 91,227 ಫಲಾನುಭವಿಗಳಿಗೆ 3325 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ವರ್ಗದ 37,466 ಫಲಾನುಭವಿಗಳಿಗೆ ಒಟ್ಟು 1399 ಕೋಟಿ ರೂ.ಆರ್ಥಿಕ ಸಹಾಯವನ್ನು ನೀಡಲಾಗಿದೆ. ಅದೇ ರೀತಿ 71,475 ಮಂದಿ ಮಹಿಳೆಯರಿಗೆ ಒಟ್ಟು 2911 ಕೋಟಿ ರೂ.ಗಳ ಸಾಲವನ್ನು ವಿವಿಧ ಉದ್ದೇಶಗಳಿಗಾಗಿ ವಿತರಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ 415 ವಿದ್ಯಾರ್ಥಿಗಳಿಗೆ ವಿದ್ಯಾ ಸಾಲ ಯೋಜನೆಯಡಿ 24 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ 33,415 ಮಂದಿ ರೈತ ಖಾತೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಯಡಿ 498 ಕೋಟಿ ರೂ. ವಿತರಿಸಲಾಗಿದೆ ಎಂದು ರುದ್ರೇಶ್ ಡಿ.ಸಿ.ತಿಳಿಸಿದರು.
ನಬಾರ್ಡ್‌ನ ಎಜಿಎಂ ಸಂಗೀತಾ ಕರ್ತಾ, ಕೆನರಾ ಬ್ಯಾಂಕಿನ ಎಜಿಎಂ ಜಗದೀಶ್ ಶೆಣೈ ಹಾಗೂ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ. ಕಾಳೆ ಹಾಗೂ ವಿವಿಧ ಬ್ಯಾಂಕು ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಲ ದೊಡ್ಡಕುಳುಗಳಿಗಲ್ಲ; ಬಡವರಿಗೆ
ಬ್ಯಾಂಕುಗಳು ಹೆಚ್ಚು ಸಾಲ ನೀಡಬೇಕೆಂದು ಹೇಳಿದಾಕ್ಷಣ ದೊಡ್ಡ ಕುಳುಗಳಿಗೆ, ಬಿಳಿಯಾನೆಗಳಿಗೆ ಸಾಲ ನೀಡುವುದಲ್ಲ. ಅಗತ್ಯವಿದ್ದವರಿಗೆ, ಬಡವರಿಗೆ, ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಾಲವನ್ನು ತ್ವರಿತಗತಿಯಲ್ಲಿ ನೀಡಬೇಕು ಎಂದು ಜಿಪಂ ಸಿಇಓ ಡಾ.ನವೀನ್ ಭಟ್ ತಿಳಿಸಿದರು.
ಸಮಾಜದ ಕುರಿತಂತೆ ಬ್ಯಾಂಕುಗಳಿಗೆ ಬದ್ಧತೆಗಳಿವೆ. ಸಮಾಜದ ಬಳಿಕ ಹಣವಿಲ್ಲದಿದ್ದರೆ, ಆರ್ಥಿಕತೆ ಸುಧಾರಿಸುವುದಿಲ್ಲ. ಹೀಗಾಗಿ ಅವರ ಬಳಿ ಹಮ ಓಡಾಡುವಂತಿರಬೇಕು. ಹೀಗಾಗಿ ಅಗತ್ಯವುಳ್ಳವರಿಗೆ ಸಾಲ ನೀಡಲು ಆದ್ಯತೆ ನೀಡಿ ಎಂದರು.







