ಕೆ.ರಮನಾಥ ಭಂಡಾರಿ

ಕುಂದಾಪುರ, ಜೂ.30: ಹೆಂಚು ಕಾರ್ಮಿಕರ ಸಹಕಾರಿ ಸಂಘದ ಮಾಜಿ ಕಾರ್ಯದರ್ಶಿ, ತೆಕ್ಕಟ್ಟೆ ಕೆದೂರು ನಿವಾಸಿ ರಮನಾಥ ಭಂಡಾರಿ(55) ಅನಾರೋಗ್ಯದಿಂದ ಇಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ 33 ವರ್ಷಗಳಿಂದ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ಅನಾರೋಗ್ಯ ಕಾರಣ ಸ್ವಯಂ ನಿವೃತ್ತಿ ಪಡೆದಿದ್ದರು. ಇವರು ವಿದ್ಯಾರ್ಥಿ ದೆಸೆ ಯಲ್ಲಿಯೇ ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಸಂಘಟನೆಯ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ನಂತರ ಹಲವಾರು ವರ್ಷ ಗಳ ಕಾಲ ಡಿವೈಎಫ್ಐ ಸಂಘಟನೆಯಲ್ಲಿದ್ದು ಹೋರಾಟ ಚಳವಳಿಯಲ್ಲಿ ಸಕ್ರೀಯರಾಗಿ ದ್ದರು. ಇವರು ಸಿಪಿಎಂ ಪಕ್ಷದ ಟೌನ್ ಶಾಖೆಯ ಕಾರ್ಯ ದರ್ಶಿಯಾಗಿದ್ದರು.
ಇವರ ನಿಧನಕ್ಕೆ ಸಿಪಿಐ(ಎಂ) ಕುಂದಾಪುರ ವಲಯ ಸಮಿತಿ ಶ್ರದ್ದಾಂಜಲಿ ಸಲ್ಲಿಸಿದೆ. ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಹಾಗು ಸಹೋದರ ಮಾವ ಸಿಪಿಎಂ ಪಕ್ಷದ ಹಿರಿಯ ಮುಖಂಡ ದಾಸ ಭಂಡಾರಿ ಅವರನ್ನು ಅಗಲಿದ್ದಾರೆ.
Next Story





