ಜಾನುವಾರುಗಳ ವಾರಸುದಾರರಿಗೆ ಸೂಚನೆ
ಉಡುಪಿ, ಜೂ.30: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಜೂನ್ 27ರಂದು ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಗುಲ್ವಾಡಿ ಕಾಂಡ್ಲಗದ್ದೆ ಎಂಬಲ್ಲಿ ದಾಳಿ ನಡೆಸಿ ಹಿಂಸಾತ್ಮಕವಾಗಿ ಕಟ್ಟಿಹಾಕಿದ್ದ 23 ಜಾನುವಾರುಗಳನ್ನು ಮಹಜರಿನ ಮೂಲಕ ಸ್ವಾಧೀನಕ್ಕೆ ಪಡೆದು ಕೊಂಡು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕುಂದಾಪುರ ತಾಲೂಕು ಅಸೋಡು ಗ್ರಾಮದ ಕಾಮಧೇನು ಗೋಸಂರಕ್ಷಣಾ ಕೇಂದ್ರಕ್ಕೆ ರವಾನಿಸಿದ್ದಾರೆ.
ಪ್ರಕರಣದ ಆರೋಪಿಗಳ ವಿರುದ್ಧ ಠಾಣೆಯಲ್ಲಿ ಕಲಂ 379 ಐಪಿಸಿ ಮತ್ತು ಕಲಂ 11(1)(ಡಿ) ಪ್ರಾಣಿಹಿಂಸೆ ನಿಷೇಧ ಕಾಯ್ದೆ 1960ರಂತೆ ಪ್ರಕರಣ ದಾಖಲಿಸಲಾಗಿದೆ. ಇಲ್ಲಿ ವಶಪಡಿಸಿಕೊಂಡಿರುವ 23 ಜಾನುವಾರುಗಳನ್ನು ಕಳೆದುಕೊಂಡವರು ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರನ್ನು ಂಪರ್ಕಿ ಸುವಂತೆ ಪ್ರಕಟಣೆ ತಿಳಿಸಿದೆ.
Next Story





