ದೇಶಾದ್ಯಂತ ಜುಲೈ 1ರಿಂದ ಅಮೂಲ್ ಹಾಲಿನ ದರ ಲೀಟರ್ ಗೆ 2 ರೂ. ಹೆಚ್ಚಳ

ಹೊಸದಿಲ್ಲಿ:ಇಂಧನ ಬೆಲೆ ಏರಿಕೆ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಧ್ಯೆ ಇದೀಗ ಅಮೂಲ್ ನ ಹಾಲಿನ ದರವು ಹೆಚ್ಚಳವಾಗಿದೆ. ಜುಲೈ 1 ರಿಂದ ದೇಶಾದ್ಯಂತ ಅಮೂಲ್ ಹಾಲಿನ ದರ ಲೀಟರ್ ಗೆ 2 ರೂಪಾಯಿ ಏರಿಕೆಯಾಗಲಿದೆ.
ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಈ ವಿಷಯವನ್ನು ಬುಧವಾರ ಪ್ರಕಟಿಸಿದೆ. ತಾಜಾ, ಗೋಲ್ಡ್, ಶಕ್ತಿ, ಟಿ-ಸ್ಪೆಷಲ್ ಸೇರಿದಂತೆ ಅಮೂಲ್ ಹಾಲಿನ ಎಲ್ಲ ಇತರೆ ಬ್ಯಾಂಡ್ ಗಳ ಬೆಲೆಗಳು ಸಹ ಏರಿಕೆಯಾಗಲಿದೆ.
ಅದೇ ರೀತಿ ಹಸು ಹಾಗೂ ಎಮ್ಮೆಯ ಹಾಲು ಸಹ ಹೆಚ್ಚಳವಾಗಲಿದೆ. ಒಂದು ವರ್ಷ, 7 ತಿಂಗಳುಗಳ ಬಳಿಕ ಅಮೂಲ್ ನ ಹಾಲಿನ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳವೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಕಂಪೆನಿ ತಿಳಿಸಿದೆ.
Next Story





