ದ.ಕ. ಜಿಲ್ಲೆ: ಕೋವಿಡ್‌ಗೆ 15 ಬಲಿ; 339 ಮಂದಿಗೆ ಕೊರೋನ ಪಾಸಿಟಿವ್
ಕೋವಿಡ್ ಪಾಸಿಟಿವಿಟಿ ಪ್ರಮಾಣದಲ್ಲಿ ಇಳಿಕೆ

ಮಂಗಳೂರು, ಜೂ.30: ದ.ಕ.ಜಿಲ್ಲೆಯಲ್ಲಿ ಬುಧವಾರ 15 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 1,195ಕ್ಕೇರಿದೆ. ಬುಧವಾರ ಬಲಿಯಾದ 10 ಪುರುಷ ಮತ್ತು 5 ಮಹಿಳೆಯರ ಪೈಕಿ ಬಂಟ್ವಾಳ 2, ಬೆಳ್ತಂಗಡಿ 3, ಮಂಗಳೂರು 1, ಪುತ್ತೂರು 3 ಹಾಗೂ ಹೊರ ಜಿಲ್ಲೆಯ 6 ಮಂದಿ ಸೇರಿದ್ದಾರೆ.
ಬುಧವಾರ 339 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಈವರೆಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿಗೊಳಗಾದವರ ಸಂಖ್ಯೆ 92,852 ಕ್ಕೇರಿದೆ. ಅಲ್ಲದೆ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 3.89ಕ್ಕಿಳಿದಿದೆ.
ಬುಧವಾರ 700 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಂತೆ ಈವರೆಗೆ ಗುಣಮುಖರಾದವರ ಸಂಖ್ಯೆ 86,995ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 4,662 ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಈವರೆಗೆ 10,41,318 ಮಂದಿಯ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 9,48,466 ಮಂದಿಯ ವರದಿ ನೆಗೆಟಿವ್ ಬಂದಿದೆ.
ದಂಡ ವಸೂಲಿ: ಮಾಸ್ಕ್ ನಿಯಮ ಉಲ್ಲಂಘಿಸಿದ 76,695 ಮಂದಿಯಿಂದ 93,61,217 ರೂ. ದಂಡ ವಸೂಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







