ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು ವಿಫಲ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್

ಉಡುಪಿ, ಜೂ.30: ಕೋವಿಡ್ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ವಿಫಲಗೊಂಡಿವೆ. ಇಚ್ಚಾಶಕ್ತಿಯ ಕೊರತೆ, ಪೂರ್ವ ತಯಾರಿ ಇಲ್ಲದೆ ಸಮಯಕ್ಕೆ ಸರಿಯಾಗಿ ಔಷಧಿ, ವೆಂಟಿಲೇಟರ್, ಬೆಡ್‌ಗಳ ಪೂರೈಕೆಯಲ್ಲಾದ ವಿಫಲತೆಯಿಂದ ಕೋವಿಡ್‌ಗೆ ಹಲವಾರು ಮಂದಿ ಬಲಿಯಾಗಿದ್ದಾರೆ. ಆದರೆ ಸರಕಾರಗಳು ಸಾವಿನ ನಿಖರ ಸಂಖ್ಯೆಯನ್ನು ನೀಡದೆ ಮುಚ್ಚಿಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆರೋಪಿಸಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಕೋವಿಡ್ ನಿರ್ವಹಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದ ಕೊಡವೂರು, ಪಕ್ಷದ ಮುಖಂಡರು, ಕಾರ್ಯಕರ್ತರು ಕೋವಿಡ್ ಜಾಗೃತಿ ಮೂಡಿಸುವ ಜೊತೆಗೆ ಆರ್ಥಿಕ ಹಾಗೂ ಅಗತ್ಯ ಸಹಾಯ ಮಾಡುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿರುವುದು ಪ್ರಶಂಸನೀಯ ಎಂದರು.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ವನದಲ್ಲಿನಡೆದಜಿಲ್ಲಾಕಾಂಗ್ರೆಸ್‌ಕಾರ್ಯಕಾರಿಸಮಿತಿಸೆಯಲ್ಲಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಕೋವಿಡ್ ನಿರ್ವಹಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದ ಕೊಡವೂರು, ಪಕ್ಷದ ಮುಖಂಡರು, ಕಾರ್ಯಕರ್ತರು ಕೋವಿಡ್ ಜಾಗೃತಿ ಮೂಡಿಸುವ ಜೊತೆಗೆ ಆರ್ಥಿಕ ಹಾಗೂ ಅಗತ್ಯ ಸಹಾಯ ಮಾಡುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿರುವುದು ಪ್ರಶಂಸನೀಯ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸರಕಾರದ ಆಡಳಿತ ವೈಖರಿ ವಿರುದ್ಧ ಮಾತನಾಡಿದವರಿಗೆ ದೇಶದ್ರೋಹದ ಪ್ರಕರಣ ದಾಖಲಿಸಿ ಧ್ವನಿ ಅಡಗಿಸುವ ಪ್ರಯ್ನ ನಡೆಯುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಗೆ ಈಗಿಂದೀಗಲೇ ತಯಾರಿ ನಡೆಸಬೇಕಾಗಿದೆ. ಸರಕಾರ ಕ್ಷೇತ್ರ ವಿಂಗಡನೆಯನ್ನು ತನ್ನ ಅನುಕೂಲಕ್ಕೆ ಬೇಕಾದಂತೆ ಮಾಡಿಕೊಳ್ಳುವ ತಯಾರಿ ನಡೆಸುತ್ತಿದೆ. ಇದರ ಬಗ್ಗೆ ಪಕ್ಷದ ವತಿಯಿಂದ ಅಹವಾಲನ್ನು ಸರಕಾರಕ್ಕೆ ಮಂಡಿಸುವಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಲಾಕ್‌ಡೌನ್ ಅವಧಿಯಲ್ಲಿ ನಿಧನರಾದ ಪಕ್ಷದ ಹಲವು ಮುಖಂಡರಿಗೆ ಅವರ ಪಕ್ಷ ಸೇವೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭ ದಲ್ಲಿ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ರಾಜ್ಯ ಸಹ ಸಂಚಾ ಲಕಿಯಾಗಿ ನಿಯುಕ್ತಿಗೊಂಡ ರೋಶನಿ ಒಲಿವೆರಾರನ್ನು ಅಭಿನಂದಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ಕುಶಲ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ವಂದಿಸಿ ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ವೆರೋನಿಕಾ ಕರ್ನೇಲಿಯೋ, ನವೀನ್‌ಚಂದ್ರ ಜೆ. ಶೆಟ್ಟಿ, ಬಿ.ನರಸಿಂಹ ಮೂರ್ತಿ, ಸರಸು ಡಿ. ಬಂಗೇರಾ, ರಾಜು ಪೂಜಾರಿ, ಪ್ರಖ್ಯಾತ್ ಶೆಟ್ಟಿ, ಬಿಪಿನ್‌ಚಂದ್ರಪಾಲ್ ನಕ್ರೆ, ಅಣ್ಣಯ್ಯ ಸೇರಿಗಾರ್, ಕಿಶನ್‌ಹೆಗ್ಡೆ ಕೊಳ್ಕೆಬೈಲ್, ಬ್ಲಾಕ್ ಅಧ್ಯಕ್ಷರಾದ ಶಂಕರ್ ಕೆ. ಕುಂದರ್, ಮಂಜುನಾಥ ಪೂಜಾರಿ, ಕೆ.ಸದಾಶಿವ ದೇವಾಡಿಗ, ಪ್ರದೀಪ್ ಕುಮಾರ್ ಶೆಟ್ಟಿ, ದಿನಕರ್ ಹೇರೂರು, ಸತೀಶ್ ಅಮೀನ್ ಪಡುಕೆರೆ, ನೀರೆ ಕೃಷ್ಣ ಶೆಟ್ಟಿ, ಶಬ್ಬೀರ್ ಅಹ್ಮದ್, ಹಬೀಬ್ ಅಲಿ, ಕೀರ್ತಿ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ, ಪ್ರಶಾಂತ್ ಜತ್ತನ್ನ, ಡಾ. ಸುನೀತಾ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಬಾಲಕೃಷ್ಣ ಪೂಜಾರಿ, ನಿತ್ಯಾನಂದ ಶೆಟ್ಟಿ, ರೋಶನ್ ಶೆಟ್ಟಿ, ಸೌರಭ್ ಬಲ್ಲಾಳ್, ದೀಪಕ್ ಕೋಟ್ಯಾನ್, ಜನಾರ್ದನ ಭಂಡಾರ್ಕಾರ್, ಅಬ್ದುಲ್ ಅಜೀಜ್ ಹೆಜಮಾಡಿ, ವೈ. ಸುಕುಮಾರ್, ಎಂ.ಪಿ. ಮೊಯಿದಿನಬ್ಬ, ಚಂದ್ರಶೇಖರ್ ಶೆಟ್ಟಿ, ಡೆರಿಕ್ ಡಿ’ಸೋಜಾ, ಕಿಶೋರ್ ಕುಮಾರ್ ಎರ್ಮಾಳ್, ವಿಲ್ಸನ್ ರೋಡ್ರಿಗಸ್, ಜಯರಾಂ ನಾಯ್ಕಿ ಮೊದಲಾದವರು ಉಪಸ್ಥಿತರಿದ್ದರು.







