ಕೊರೋನದಿಂದ ಪತ್ನಿ ಮೃತ್ಯು: ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಬೆಂಗಳೂರು, ಜೂ.30: ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅತ್ತಿಬೆಲೆಯ ಸತೀಶ್ ರೆಡ್ಡಿ (45), ಇವರ ಪುತ್ರಿಯರಾದ ಕೀರ್ತಿ(19), ಮೊನಿಷಾ(17) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.
ಸತೀಶ್ ರೆಡ್ಡಿ ಅವರ ಪತ್ನಿ ಆಶಾಗೆ ಕೋವಿಡ್ ಸೋಂಕು ತಗುಲಿತ್ತು. ಚಿಕಿತ್ಸೆಯ ಬಳಿಕವೂ ಚೇತರಿಸಿಕೊಳ್ಳದ ಆಶಾ ಮೇ 6ರಂದು ಮೃತಪಟ್ಟಿದ್ದರು. ಇದರಿಂದ ಸತೀಶ್ ಅವರ ಕುಟುಂಬ ಖಿನ್ನತೆಗೆ ಒಳಗಾಗಿತ್ತು. ಈ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ತಂದೆ ಸತೀಶ್ ರೆಡ್ಡಿ ತನ್ನ ಮಕ್ಕಳ ಜೊತೆ ಮಂಗಳವಾರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story





