ಅಂದರ್ ಬಾಹರ್ : 27 ಮಂದಿ ಬಂಧನ
ಕುಂದಾಪುರ, ಜೂ.30: ಮದ್ದುಗುಡ್ಡೆ ಬೋಟ್ ನಿರ್ಮಾಣ ಮಾಡುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರೋಪದಲ್ಲಿ ಹರೀಶ, ಪ್ರಭಾಕರ, ನವೀನ್ ಪೂಜಾರಿ, ವಾಸು ಮೊಗವೀರ, ಸಂತೋಷ ಚರ್ಚ್ರೋಡ್, ಸಂದೀಪ ಚರ್ಚ್ರೋಡ್, ಸಂತೋಷ ಬರೆಕಟ್ಟು, ಪ್ರದೀಪ ಚರ್ಚ್ರೋಡ್, ವಿಜಯ ಚರ್ಚ್ರೋಡ್, ಪ್ರಶಾಂತ, ವೆಂಕಟೇಶ ಚರ್ಚ್ರೋಡ್, ಶಿವ ಖಾರ್ವಿ ಎಂಬವರನ್ನು ಪೊಲೀಸರು ಬಂಧಿಸಿ 3125ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕೋಟೇಶ್ವರ ಗ್ರಾಮದ ಅರಾಲುಗುಡ್ಡೆ ರಸ್ತೆಯ ಕೆ.ಕೆ.ಹೌಸ್ ಬಳಿ ಜೂ.29 ರಂದು ಬೆಳಗ್ಗೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪದಲ್ಲಿ ಸಂಪತ್ ಪೂಜಾರಿ (22), ವಿಶ್ವನಾಥ ಪೂಜಾರಿ(30), ಅರುಣ್(30), ರಂಜಿತ್(24), ರಿತೇಶ್(19), ಅಶೋಕ(35), ಅಭಿಷೇಕ್ (20), ಹರೀಶ್(30), ಸಂದೀಪ (28), ಅರುಣ್(28), ಶಿವ(33), ಶ್ರವಣ್(27), ಗಣೇಶ್(32), ಸಂದೇಶ(19), ಚರಣ್ರಾಜ್(24) ಎಂಬವರನ್ನು ಪೊಲೀಸರು ಬಂಧಿಸಿ, 3610ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





