ಕಷ್ಟಕಾಲದಲ್ಲೂ ವೃತ್ತಿಪರತೆ ಎತ್ತಿಹಿಡಿದ ಪತ್ರಕರ್ತರಿಗೆ ಕೋಟಿ ಕೋಟಿ ನಮನಗಳು: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.1: ಪತ್ರಕರ್ತ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ಕೋವಿಡ್ - 19 ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ " ಜನ ಮತ್ತು ಸಮಾಜದ " ಹಿತಕ್ಕಾಗಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಾಹಿಸಿದ ನಿಮ್ಮ ಕಾಳಜಿ ಮತ್ತು ಬದ್ದತೆಗೆ ಬೆಲೆಕಟ್ಟಲು ಸಾಲದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂತಹ ಕಷ್ಟಕಾಲದಲ್ಲೂ ವೃತ್ತಿಪರತೆಯನ್ನು ಎತ್ತಿಹಿಡಿದ ಪತ್ರಕರ್ತರಿಗೆ ನನ್ನ ಕೋಟಿ ಕೋಟಿ ನಮನಗಳು. ಜನರಲ್ಲಿ ತಾವು ಮೂಡಿಸಿದ ಜಾಗೃತಿ, ಅರಿವಿನ ಪರಿಣಾಮ ರಾಜ್ಯದಲ್ಲಿ ಇಂದು ಕೊವಿಡ್ ಸೋಂಕು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು ಕರ್ನಾಟಕ 'ಕೊರೋನ ಮುಕ್ತ' ದತ್ತ ದಾಪುಗಾಲುಟ್ಟಿದೆ ಎಂದು ತಿಳಿಸಿದ್ದಾರೆ.
ಕೊರೋನ ಸಹಜ ಸ್ಥಿತಿಗೆ ಬರುತ್ತಿರುವುದರಲ್ಲಿ ಮಾಧ್ಯಮ ಮತ್ತು ಪತ್ರಕರ್ತರ ಅಸಾಧಾರಣ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವರ್ತಮಾನದ ದಿನಗಳಲ್ಲಿ ಸತ್ಯಶೋಧಿಸುವ, ಧೈರ್ಯದಿಂದ ಅಭಿವ್ಯಕ್ತಿಸುವ ಮಾಧ್ಯಮದ ಶಕ್ತಿ ಪ್ರಜ್ವಲವಾಗಿ ಬೆಳಗಲಿ. ನನ್ನ ಸಮಸ್ತ ಪತ್ರಕರ್ತ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಾಡಿನ ಎಲ್ಲ ಪತ್ರಕರ್ತರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿರುವ ಮಾಧ್ಯಮ, ಸ್ವತಂತ್ರವಾಗಿ, ನ್ಯಾಯನಿಷ್ಠವಾಗಿ ಹಾಗೂ ಮೌಲ್ಯಯುತವಾಗಿ ಕಾರ್ಯನಿರ್ವಹಿಸುತ್ತಿರಲಿ ಎಂದು ಆಶಿಸುತ್ತೇನೆ.
- ಯಡಿಯೂರಪ್ಪ, ಮುಖ್ಯಮಂತ್ರಿ
ಪತ್ರಕರ್ತರು ಬಗ್ಗದೆ, ಕುಗ್ಗದೆ, ಅಂಜದೆ, ಅಳುಕದೆ ಸತ್ಯಸಂಧತೆಯಿಂದ, ನ್ಯಾಯಬದ್ಧವಾಗಿ ಓದುಗ-ವೀಕ್ಷಕರಿಗೆ ಬದ್ಧವಾಗಿ ಕಾರ್ಯನಿರ್ವಹಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವಂತಾಗಲಿ. ಪತ್ರಕರ್ತ ಬಂಧುಗಳಿಗೆ "ಪತ್ರಿಕಾ ದಿನಾಚರಣೆ"ಯ ಶುಭಕಾಮನೆಗಳು
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ( ಟ್ವೀಟ್)
ಪತ್ರಕರ್ತ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.ಕೋವಿಡ್ - 19 ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ " ಜನ ಮತ್ತು ಸಮಾಜದ " ಹಿತಕ್ಕಾಗಿ ತಮ್ಮ ಜೀವದ ಹಂಗು ತೊರೆದು
— H D Kumaraswamy (@hd_kumaraswamy) July 1, 2021
ಕರ್ತವ್ಯ ನಿರ್ವಾಹಿಸಿದ ನಿಮ್ಮ ಕಾಳಜಿ ಮತ್ತು ಬದ್ದತೆಗೆ ಬೆಲೆಕಟ್ಟಲು ಸಾಲದು. (1/3)
ಪತ್ರಕರ್ತರು ಬಗ್ಗದೆ, ಕುಗ್ಗದೆ, ಅಂಜದೆ, ಅಳುಕದೆ ಸತ್ಯಸಂಧತೆಯಿಂದ, ನ್ಯಾಯಬದ್ಧವಾಗಿ
— Siddaramaiah (@siddaramaiah) July 1, 2021
ಓದುಗ-ವೀಕ್ಷಕರಿಗೆ ಬದ್ಧವಾಗಿ ಕಾರ್ಯನಿರ್ವಹಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವಂತಾಗಲಿ.
ಪತ್ರಕರ್ತ ಬಂಧುಗಳಿಗೆ "ಪತ್ರಿಕಾ ದಿನಾಚರಣೆ"ಯ ಶುಭಕಾಮನೆಗಳು. pic.twitter.com/O5Ymf7hXYJ
ನಾಡಿನ ಎಲ್ಲ ಪತ್ರಕರ್ತರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿರುವ ಮಾಧ್ಯಮ, ಸ್ವತಂತ್ರವಾಗಿ, ನ್ಯಾಯನಿಷ್ಠವಾಗಿ ಹಾಗೂ ಮೌಲ್ಯಯುತವಾಗಿ ಕಾರ್ಯನಿರ್ವಹಿಸುತ್ತಿರಲಿ ಎಂದು ಆಶಿಸುತ್ತೇನೆ.#ಪತ್ರಿಕಾದಿನಾಚರಣೆ pic.twitter.com/tdKhjZpqgs
— CM of Karnataka (@CMofKarnataka) July 1, 2021







