ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸಹ ಸದಸ್ಯರಾಗಿ ಕಮರುದ್ದೀನ್ ಸಾಲ್ಮರ ನೇಮಕ

ಪುತ್ತೂರು: ಕರ್ನಾಟಕ ಸರಕಾರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿರುವ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿಯ, ಸಹ ಸದಸ್ಯರನ್ನಾಗಿ ಪುತ್ತೂರಿನ ಸಾಹಿತಿ, ಕವಿ ಮತ್ತು ಹಾಡುಗಾರ, ಕಮರುದ್ದೀನ್ ಸಾಲ್ಮರ ಅವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ರಹೀಮ್ ಉಚ್ಚಿಲ್ ಅವರು ನೇಮಕಗೊಳಿಸಿ ಆದೇಶಿಸಿದ್ದಾರೆ.
ಕಮರುದ್ದೀನ್ ಸಾಲ್ಮರ ಅವರು ಹಲವಾರು ವರ್ಷಗಳಿಂದ ಸಾಹಿತ್ಯರಂಗದಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಭಾವನಾತ್ಮಕ ಹಾಗೂ ಸೌಹಾರ್ದ ಹಾಡುಗಳ ಮೂಲಕ ಪ್ರಸಿದ್ಧರಾಗಿರುತ್ತಾರೆ.
ಇವರು ರಚಿಸಿ ಹಾಡಿದ "ಎವುಡೆ ವುಳ್ಳೆ ನೀ" ಎಂಬ ಬ್ಯಾರಿ ಹಾಡು ಒಳಗೊಂಡ ಕ್ಯಾಸೆಟ್ ಜನಪ್ರಿಯವಾಗಿದೆ. ಇವರು ಪುತ್ತೂರು ಸಾಲ್ಮರ ನಿವಾಸಿಯಾಗಿದ್ದು, ಸಾಲ್ಮರ ಮನೆತನದ ದಿವಂಗತ ಅಬ್ದುಲ್ ರಹಿಮಾನ್ ಹಾಗೂ ನಫೀಸಾ ದಂಪತಿಯ ಪುತ್ರ.
Next Story





