ಮಾಧ್ಯಮಗಳ ಏಕಪಕ್ಷೀಯ ದುರ್ಬಳಕೆ ಅಪಾಯದ ಅರಿವು ಪತ್ರಕರ್ತರಿಗೆ ಅಗತ್ಯ: ವಿವೇಕಾನಂದ ಪನಿಯಾಲ
ಪತ್ರಿಕಾ ದಿನಾಚರಣೆಯಲ್ಲಿ ‘ಮಾಧ್ಯಮ ಮತ್ತು ಕಾನೂನು’ ವಿಚಾರಗೋಷ್ಠಿ

ಉಡುಪಿ, ಜು.1: ತನಿಖೆಯ ಅವಧಿಯಲ್ಲಿ ಪೊಲೀಸರು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಬಾರದು ಎಂದು ರಾಜ್ಯ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಕೆಲವೊಂದು ವ್ಯಕ್ತಿಗಳು ಮಾಧ್ಯಮಗಳ ಏಕಪಕ್ಷೀಯ ದುರ್ಬಳಕೆ ಮಾಡುವ ಅಪಾಯವನ್ನು ಪತ್ರಕರ್ತರು ಅರಿತು ಕೊಳ್ಳಬೇಕಾಗಿದೆ. ಬದಲಾದ ಕಾನೂನುಗಳನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳುವುದು ಬಹಳ ಅಗತ್ಯವಾಗಿದೆ ಎಂದು ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಹಾಗೂ ನ್ಯಾಯವಾದಿ ವಿವೇಕಾನಂದ ಪನಿಯಾಲ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿ ಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಮಾಧ್ಯಮ ಮತ್ತು ಕಾನೂನು’ ವಿಷಯದ ಕುರಿತು ಅವರು ವಿಚಾರ ಮಂಡಿಸಿದರು.
ಪತ್ರಿಕೆಯಲ್ಲಿನ ಕೆಲವೊಂದು ಪದ ಬಳಕೆ ಸಮಾಜದ ಮೇಲೆ ಸಾಕಷ್ಟು ಪರಿಣಾಮಗಳು ಬೀರುತ್ತವೆ. ಪತ್ರಕರ್ತರು ಅಪರಾಧ ಸುದ್ದಿಗಳ ಸಂದರ್ಭ ದಲ್ಲಿ ಪೊಲೀಸರ ಹೇಳಿಕೆ ಜೊತೆಗೆ ಸಂತ್ರಸ್ತರ ಹೇಳಿಕೆಯನ್ನೂ ಕೂಡ ದಾಖಲಿಸಬೇಕು. ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರು ವಾಗ ಆ ಪ್ರಕರಣಗಳ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಲೇಖನ ಬರೆಯ ಬಾರದು ಎಂದರು.
ಸರಕಾರ ವೈದ್ಯರಂತೆ ಪತ್ರಕರ್ತರ ರಕ್ಷಣೆಗೆ ಕಾಯಿದೆಯನ್ನು ಅಗತ್ಯವಾಗಿ ಜಾರಿಗೆ ತರಬೇಕಾಗಿದೆ. ಸಂವಿಧಾನ, ಮಾನವ ಹಕ್ಕುಗಳ ಸಂರಕ್ಷಣೆ ಯಲ್ಲಿ ಪತ್ರಕರ್ತರು ಹಾಗೂ ವಕೀಲರ ಪಾತ್ರ ಬಹಳ ಪ್ರಮುಖವಾಗಿದೆ. ಸಮಾಜವನ್ನು ಅರ್ಥ ಮಾಡಿ ಕೊಂಡರೆ ಮಾತ್ರ ಈ ದೇಶದ ಕಾನೂನನ್ನು ಅರ್ಥ ಮಾಡಿ ಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಸಂಘದ ಗುರುತಿನ ಚೀಟಿಯನ್ನು ಸದಸ್ಯರಿಗೆ ವಿತರಿಸ ಲಾಯಿತು. ಮುಖ್ಯ ಅತಿಥಿಯಾಗಿ ಉಡುಪಿ ವಾರ್ತಾಧಿಕಾರಿ ವಿ.ಮಂಜುನಾಥ್ ಮಾತನಾಡಿದರು. ಅಧ್ಯಕ್ಷತೆಯನ್ನು ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ರಾೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.








.jpeg)
.jpeg)

