ಬೆಳಗಾವಿಯ ರೇಸ್ಕೋರ್ಸ್ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ: ಬೆಚ್ಚಿ ಬಿದ್ದ ವಾಯುವಿಹಾರಿಗಳು

ಸಾಂದರ್ಭಿಕ ಚಿತ್ರ
ಬೆಳಗಾವಿ, ಜು.1: ಚಿರತೆಯೊಂದು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಾಯುವಿಹಾರಿಗಳು ಭಯಭೀತರಾಗಿರುವ ಘಟನೆ ಬೆಳಗಾವಿ ನಗರದ ರೇಸ್ಕೋರ್ಸ್ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಲಾಕ್ಡೌನ್ನಿಂದ ಕಳೆದ ಹಲವು ದಿನಗಳಿಂದ ವಾಯುವಿವಾರಿಗಳಿಗೆ ನಿರ್ಬಂಧ ವಿಧಿಸಲಾಗಿದ್ದ ರೇಸ್ಕೋರ್ಸ್ ರಸ್ತೆಯ ಉದ್ಯಾನವನದ ಗೇಟ್ ತೆರೆದಿರುವ ಹಿನ್ನೆಲೆಯಲ್ಲಿ ಜು.1ರ ಬೆಳಗ್ಗೆ ನಾಗರಿಕರು ವಾಯುವಿಹಾರಕ್ಕೆ ತೆರಳಿದ್ದರು.
ಆ ಸಂದರ್ಭದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಇದರಿಂದ, ಬೆಚ್ಚಿಬಿದ್ದಿರುವ ವಾಯುವಿಹಾರಿಗಳು ಅಲ್ಲಿಂದ ವಾಪಸ್ ಜನಸಂದಣಿ ಇರುವ ಕಡೆಗೆ ಹೋಗಿದ್ದಾರೆ. ಬಳಿಕ ಈ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲಿಸಿ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ಕೈಗೊಂಡಿದ್ದಾರೆ.
Next Story





