ಕೋಳಿ ಅಂಕ: ನಾಲ್ಕು ಮಂದಿ ಬಂಧನ
ಹೆಬ್ರಿ, ಜು.1: ನಾಲ್ಕೂರು ಗ್ರಾಮದ ಮಾರಾಳಿ ಕಂಬ್ಲಿಬೆಟ್ಟು ಎಂಬಲ್ಲಿ ಜೂ.30ರಂದು ಸಂಜೆ ವೇಳೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಹೆಬ್ರಿ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಚಾರಾ ಗ್ರಾಮದ ಕಾರಾಡಿಯ ಪ್ರದೀಪ್ ಶೆಟ್ಟಿ(45), ಪ್ರವೀಣ್ ಶೆಟ್ಟಿ(36), ಮುಟ್ಲಪಾಡಿಯ ಕೀರ್ತನಾ(24), ಕಂಬ್ಲಿಬೆಟ್ಟುವಿನ ರಾಜೇಶ್(30) ಬಂಧಿತ ಆರೋಪಿಗಳು. ಇವರಿಂದ 4 ಕೋಳಿ ಹುಂಜಗಳನ್ನು ಹಾಗೂ 1,120ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





