ಬಡಗಬೆಳ್ಳೂರು ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಪೀಠೋಪಕರಣ ಹಸ್ತಾಂತರ

ಬಂಟ್ವಾಳ: ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಶಾಲಾ ಸಂಚಾಲಕರ ಕೋರಿಕೆಯ ಮೇರೆಗೆ ಬಂಟ್ವಾಳ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಕೆ. ನಾರಾಯಣ ಹೆಗ್ಡೆ ಇವರ ಮುಂದಾಳತ್ವದಲ್ಲಿ ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಡೆಸ್ಕ್, ಬೆಂಚ್, ಟೇಬಲ್, ಚೆಯರ್ ಇತ್ಯಾದಿ ಪೀಠೋಪಕರಣಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಬುಧವಾರ ಬಡಗಬೆಳ್ಳೂರು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್‌ನ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ನರಿಕೊಂಬು, ರೋಟರಿ ಕ್ಲಬ್ ಬಂಟ್ವಾಳ ಇದರ ಕಾರ್ಯದರ್ಶಿ ವಾಣಿ ಪ್ರಕಾಶ್ ಕಾರಂತ್, ಶಾಲಾ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ರಮೇಶ್ವಂದ್ರ ಭಂಡಾರಿ, ಶಾಲಾ ಸಂಚಾಲಕರಾದ ಕೆ. ನರೇಂದ್ರನಾಥ್ ಭಂಡಾರಿ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಕೇಶವ ನಾಯ್ಕ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನರೇಂದ್ರನಾಥ್ ಭಂಡಾರಿ ಸ್ವಾಗತಿಸಿದರು. ಪ್ರಕಾಶ್ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿ, ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಕೊಡಮಾಡಿದ ಪೀಠೋಪಕರಣಗಳನ್ನು ಹಸ್ತಾಂತರಿಸಿದರು.
ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸಂಕಪ್ಪ ಶೆಟ್ಟಿ ಮಾತನಾಡಿ, ಶಾಲೆಯ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು. ಶಾಲೆಯ ವತಿ ಯಿಂದ ರೋಟರಿ ಕ್ಲಬ್‌ಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ನಿವೃತ್ತ ಶಿಕ್ಷಕರಾದ ಗಂಗಾಧರ್ ರೈ, ಸಂಕಪ್ಪ ಶೆಟ್ಟಿ, ಕಟ್ಟಡ ಸಮಿತಿಯ ಉಪಾಧ್ಯಕ್ಷ ದಯಾನಂದ ಮೂಡುಬೆಟ್ಟು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚೀಂದ್ರನಾಥ ರೈ, ಶಾಲಾ ಮೇಲುಸ್ತುವಾರಿ ಸಮಿತಿ/ಎಸ್.ಡಿ.ಎಮ್.ಸಿ.ಯ ಅಧ್ಯಕ್ಷರಾದ ಗುಣವತಿ, ಶಾಲಾ ಗೌರವ ಶಿಕ್ಷಕಿಯರು, ಹಳೆ ವಿದ್ಯಾರ್ಥಿಗಳು ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಕೇಶವ ನಾಯ್ಕ್ ವಂದಿಸಿದರು.
.jpeg)







