ಸಾಂತೂರು ಶಾಖೆಯ ಶಿರ್ವ ವ್ಯವಸಾಯ ಸಹಕಾರಿ ಸಂಘ ಉದ್ಘಾಟನೆ

ಪಡುಬಿದ್ರಿ: ಸಹಕಾರಿ ಸಂಘಗಳು ಜನರ ಮನೆ ಬಾಗಿಲಿಗೆ ತೆರಳಿ ಆರ್ಥಿಕ ಸಹಿತ ವಿವಿಧ ಸಹಾಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಶಿರ್ವ ವ್ಯವಸಾಯಿಕ ಸಹಕಾರಿ ಸಂಘದ ಸಾಂತೂರು ನವೀಕೃತ ಶಾಖೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘಗಳು ಅವ್ಯವಹಾರಕ್ಕೆ ಆಸ್ಪದ ನೀಡದೆ, ಜನರಿಗೆ ನಿಕಟವಾಗಿ ಕಾರ್ಯವೆಸಗಬೇಕು ಎಂದರು.
ಶಿರ್ವ ವ್ಯವಸಾಯಿಕ ಸಹಕಾರಿ ಸಂಘ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿ, ಉಳುಮೆಗೆ ಹೆಚ್ಚಿನ ದರದಿಂದ ರೈತರಿಗಾಗುತ್ತಿದ್ದ ತೊಂದರೆ ತಪ್ಪಿಸುವ ಸಲುವಾಗಿ 2019ರಲ್ಲಿ ಸಂಘದಿಂದ ಕಡಿಮೆ ಬಾಡಿಗೆ ದರದಲ್ಲಿ ಉಳುಮೆ ಯಂತ್ರ ವ್ಯವಸ್ಥೆ ಮಾಡುವ ಮೂಲಕ ಸಹಕಾರಿ ಸಂಘ ವ್ಯಾಪ್ತಿ ರೈತರ 8 ಲಕ್ಷ ರೂ. ಉಳಿತಾಯ ಮಾಡಲಾಗಿದೆ. ಪ್ರಸ್ತುತ ವರ್ಷವೂ ಕಡಿಮೆ ದರದಲ್ಲಿ 9 ಟ್ರ್ಯಾಕ್ಟರ್ ಗಳಿಂದ 2000ಕ್ಕೂ ಹೆಚ್ಚು ಗಂಟೆಗಳ ಕೃಷಿ ಭೂಮಿ ಉಳುಮೆ ಮಾಡಲಾಗುತ್ತಿದೆ. ಅದರೊಂದಿಗೆ ಸಾಕಷ್ಟು ಕೃಷಿ ಪೂರಕ ಚಟುವಟಿಕೆಗಳನ್ನು ಹಾಗೂ ಸರ್ಕಾರದಿಂದ ದೊರೆ ಯುವ ಸೌಕರ್ಯಗಳನ್ನು ಸಂಘದಿಂದ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಸೌಹಾರ್ದ ಸಹಕಾರಿ ಮಹಾಮಂಡಲ ಬೆಂಗಳೂರು ನಿರ್ದೇಶಕ ಬೋಳ ಸದಾಶಿವ ಶೆಟ್ಟಿ, ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯೋಗಿನಿ ಶೆಟ್ಟಿ, ಉಪಾಧ್ಯಕ್ಷ ಶರತ್ ಶೆಟ್ಟಿ, ಪಿಡಿಒ ಸುರೇಶ್, ಕುತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಆಚಾರ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪಾ ಜಿ ಸುವರ್ಣ, ತಾಲ್ಲೂಕು ಪಂ. ಮಾಜಿ ಸದಸ್ಯ ಮೈಕಲ್ ರಮೇಶ್ ಡಿಸೋಜ, ಎಸ್‍ಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್, ಸ್ಥಳೀಯ ಪ್ರತಿನಿಧಿ ಡಯನಾ, ಮುದರಂಗಡಿ ಸಿಎಸ್‍ಐ ಚರ್ಚ್ ಧರ್ಮಗುರು ಮೋಹನ್ ಕುಮಾರ್, ಕಾರ್ಕಳ ಪಿಎಲ್‍ಡಿ ಬ್ಯಾಂಕ್‍ನ ರಘುವೀರ್ ಶೆಣೈ, ಮುದರಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಎಡ್ಮೇರು ಹಾಲು ಉತ್ಪಾದಕರ ಸಂಘ ಕಾರ್ಯದರ್ಶಿ ಸುನಿಲ್, ಶಿರ್ವ ಸಿಎ ಬ್ಯಾಂಕ್ ಉಪಾಧ್ಯಕ್ಷೆ ವಾರಿಜ ಪೂಜಾರ್ತಿ, ನಿರ್ದೇಶಕರಾದ ವೀರೇಂದ್ರ ಪಾಟ್ಕರ್, ಉಮೇಶ್ ಆಚಾರ್ಯ, ರಮೇಶ್ ಪ್ರಭು, ವಿಲಿಯಂ ಬ್ಯಾಪಿಸ್ಟ್, ಕೃಷ್ಣ ಮುಖಾರಿ, ರೀಟಾ ಮಥಾಯಿಸ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ, ಸಾಂತೂರು ಶಾಖೆ ವ್ಯವಸ್ಥಾಪಕ ಸುರೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಇಗ್ನೇಷಿಯಸ್ ಡಿಸೋಜ, ದಿನೇಶ್ ಸುವರ್ಣ ಉಪಸ್ಥಿತರಿದ್ದರು.







