400 ಮೀ. ಹರ್ಡಲ್ಸ್ :ವಿಶ್ವ ದಾಖಲೆ ಮುರಿದ ನಾರ್ವೆಯ ಕಾರ್ಸ್ಟನ್

photo:AP
ಓಸ್ಲೋ: ಓಸ್ಲೋದಲ್ಲಿ ಗುರುವಾರ ನಡೆದ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ನಾರ್ವೆಯ ಕಾರ್ಸ್ಟನ್ ವಾರ್ಹೋಲ್ಮ್ 400 ಮೀಟರ್ ಹರ್ಡಲ್ಸ್ ನಲ್ಲಿ 29 ವರ್ಷ ಹಳೆಯ ವಿಶ್ವ ದಾಖಲೆಯನ್ನು ಪುಡಿಗಟ್ಟಿದರು. ಈ ಮೂಲಕ ಟೋಕಿಯೊ ಒಲಿಂಪಿಕ್ಸ್ ನ ತನ್ನ ಪ್ರತಿಸ್ಪರ್ಧಿಗಳಿಗೆ ಹೊಸ ಸವಾಲು ಒಡ್ಡಿದ್ದಾರೆ.
ವಿಶ್ವ ಹಾಗೂ ಯುರೋಪಿಯನ್ ಚಾಂಪಿಯನ್ ವಾರ್ಹೋಲ್ಮ್, ಋತುವಿನ ತನ್ನ ಮೊದಲ ಹರ್ಡಲ್ಸ್ ಓಟದಲ್ಲಿ 46.70 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಮೂಲಕ 1992 ರಲ್ಲಿ ಅಮೆರಿಕದ ಕೆವಿನ್ ಯಂಗ್ ಅವರು ನಿಗದಿಪಡಿಸಿದ 46.78 ಸೆಕೆಂಡುಗಳ ವಿಶ್ವ ದಾಖಲೆಯನ್ನು ಮುರಿದರು.
29ರ ವಯಸ್ಸಿನ ನಾರ್ವೆಯ ಓಟಗಾರ ಓಸ್ಲೋನ ಪ್ರಸಿದ್ಧ ಬಿಸ್ಲೆಟ್ ಸ್ಟೇಡಿಯಂನಲ್ಲಿ, ನೆರೆದಿದ್ದ 5,000 ಅಭಿಮಾನಿಗಳ ಸಮ್ಮುಖದಲ್ಲಿ ವಿಶ್ವ ದಾಖಲೆ ನಿರ್ಮಿಸಿದರು. ಸ್ವತಃ ವಿಶ್ವ ದಾಖಲೆ ನಿರ್ಮಿಸಿರುವ ಸ್ವೀಡಿಷ್ ನ ಪೋಲ್ ವಾಲ್ಟರ್ ಅರ್ಮಾಂಡ್ ಡುಪ್ಲಾಂಟಿಸ್ ಮೊಬೈಲ್ ಫೋನ್ ಮೂಲಕ ಈ ಕ್ಷಣವನ್ನು ಸೆರೆ ಹಿಡಿದರು.
Next Story