ಜು.6ರಂದು ಮಲ್ಪೆಗೆ ಡಿ.ಕೆ.ಶಿವಕುಮಾರ್ ಭೇಟಿ

ಉಡುಪಿ, ಜು.2: ಮೀನುಗಾರಿಕೆ ನಡೆಸುವ ಮೀನುಗಾರರ ಹಾಗೂ ಮೀನು ಗಾರಿಕೆಯನ್ನೇ ಅವಲಂಬಿಸಿರುವವರ ಸಮಸ್ಯೆಗಳನ್ನು ಆಲಿಸಲು ಮಾಜಿ ಸಚಿವರೂ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಾಸಕ ಡಿ.ಕೆ.ಶಿವಕುಮಾರ್ ಅವರು ಜು.6ರ ಬೆಳಗ್ಗೆ 11 ಕ್ಕೆ ಮಲ್ಪೆ ಮೀನುಗಾರಿಕಾ ಬಂದರಿಗೆ ಆಗಮಿಸಲಿದ್ದಾರೆ.
ಮೀನುಗಾರರರು ಮತ್ಸ್ಯಕ್ಷಾಮ, ಇಂಧನ ಬೆಲೆ ಏರಿಕೆ, ಕೋವಿಡ್ ಸಂಕಷ್ಟ ಹಾಗೂ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸುತಿದ್ದು, ಸಮುದ್ರ ಮೀನುಗಾರಿಕೆ ನಡೆಸುವ ಎಲ್ಲಾ ವಿಧದ ಮೀನುಗಾರರು ಹಾಗೂ ಮೀನುಗಾರಿಕೆಯನ್ನೇ ನಂಬಿ ಬದುಕುವವರ ಸಮಸ್ಯೆಗಳನ್ನು ಡಿಕೆಶಿ ಆಲಿಸಲಿದ್ದಾರೆ ಎಂದು ಮಾಜಿ ಮೀನುಗಾರಿಕಾ ಸಚಿವ, ಉಡುಪಿಯ ಮೀನುಗಾರರ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಮೀನುಗಾರ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿರುವಂತೆ ಅವರು ಮನವಿ ಮಾಡಿದ್ದಾರೆ.
Next Story





