ರಾಜೀನಾಮೆ ನೀಡಲಿದ್ದಾರೆಂಬ ವರದಿಗಳ ಮಧ್ಯೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಉತ್ತರಾಖಂಡ ಮುಖ್ಯಮಂತ್ರಿ ರಾವತ್

ಹೊಸದಿಲ್ಲಿ: ಅಧಿಕಾರ ವಹಿಸಿಕೊಂಡ ನಾಲ್ಕು ತಿಂಗಳ ನಂತರ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ ಮಧ್ಯೆ ರಾವತ್ ಅವರು ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ ಎಂದು NDTV ವರದಿ ಮಾಡಿದೆ.
ತಿರಥ್ ರಾವತ್ ಕಳೆದ ಮೂರು ದಿನಗಳಿಂದ ದಿಲ್ಲಿಯಲ್ಲಿದ್ದರು ಹಾಗೂ ಬಿಜೆಪಿ ನಾಯಕರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದರು. ಅವರು ಗೆಲ್ಲಲೇ ಬೇಕಾದ ವಿಧಾನಸಭೆ ಚುನಾವಣೆ ನಡೆಯುವ ಕುರಿತಂತೆ ಇರುವ ಅನಿಶ್ಚಿತತೆ ಹಾಗೂ ರಾಜ್ಯ ಬಿಜೆಪಿ ಘಟಕದೊಳಗಿನ ಬಿರುಕುಗಳಿಂದಾಗಿ ಅವರು ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ.
ಸಂಸದರಾಗಿರುವ ತಿರಥ್ ರಾವತ್ ಅವರನ್ನು ಬಿಜೆಪಿ ಹೈಕಮಾಂಡ್ ಬುಧವಾರ ದಿಲ್ಲಿಗೆ ಕರೆಸಿಕೊಂಡಿತ್ತು. ಸಂವಿಧಾನದ ಪ್ರಕಾರ ಮಾರ್ಚ್ 10 ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಪೌರಿ ಗರ್ವಾಲ್ ಸಂಸದ ರಾವತ್ ಅವರು ಅಧಿಕಾರದಲ್ಲಿ ಮುಂದುವರಿಯಲು ಸೆಪ್ಟೆಂಬರ್ 10 ರ ಮೊದಲು ರಾಜ್ಯ ವಿಧಾನಸಭೆಯ ಸದಸ್ಯರಾಗಬೇಕಿದೆ.
Next Story





