ಚಿಕ್ಕಮಗಳೂರು: ಜಿ.ಪಂ, ತಾ.ಪಂ ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ಕರಡು ಅಧಿಸೂಚನೆ ಪ್ರಕಟ
ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ
ಚಿಕ್ಕಮಗಳೂರು, ಜು.2: ರಾಜ್ಯ ಚುನಾವಣಾ ಆಯೋಗ ಜಿಲ್ಲೆಯಲ್ಲಿನ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿಯ ಕರಡು ಅಧಿಸೂಚನೆಯನ್ನು ಗುರುವಾರ ಹೊರಡಿಸಿದೆ. ಜಿ.ಪಂ ಮತ್ತು ತಾ.ಪಂ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಕರಡು ಸಂಬಂಧ ಆಕ್ಷೇಪಣೆಗಳಿದ್ದಲ್ಲಿ, ಜು.8ರವರೊಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿನ ಜಿ.ಪಂ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿವರ: ಆಲ್ದೂರು-ಅನುಸೂಚಿತ ಪಂಗಡ(ಮಹಿಳೆ), ಅಂಬಳೆ-ಅನುಸೂಚಿತಜಾತಿ, ಬಿಂಡಿಗಾ (ಜಾಗರ)-ಸಾಮಾನ್ಯ, ದೇವದಾನ(ಖಾಂಡ್ಯ)-ಹಿಂದುಳಿದವರ್ಗ‘ಎ’, ಕುರುವಂಗಿ-ಹಿಂದುಳಿದ ವರ್ಗ‘ಎ’(ಮಹಿಳೆ), ಸಿಂಧಗೆರೆ(ಲಕ್ಯಾ)-ಸಾಮಾನ್ಯ(ಮಹಿಳೆ), ಮೈಲಿಮನೆ (ವಸ್ತಾರೆ)-ಹಿಂದುಳಿದವರ್ಗ‘ಎ’(ಮಹಿಳೆ), ಕಳಸ(ಮಾವಿನಕೆರೆ)-ಸಾಮಾನ್ಯ(ಮಹಿಳೆ), ಬಣಕಲ್-ಸಾಮಾನ್ಯ, ಬಿಳಗುಳ(ಕಸಬಾ(ಬಿದರಹಳ್ಳಿ)-ಸಾಮಾನ್ಯ(ಮಹಿಳೆ), ಗೋಣಿಬೀಡು- ಅನುಸೂಚಿತಜಾತಿ, ಹರಂದೂರು-ಸಾಮಾನ್ಯ, ಹರಿಹರಪುರ-ಅನುಸೂಚಿತಜಾತಿ(ಮಹಿಳೆ), ಜಯಪುರ-ಸಾಮಾನ್ಯ, ಮೆಣಸೆ-ಅನುಸೂಚಿತಜಾತಿ, ಶೃಂಗೇರಿ(ಕಸಬಾ)-ಹಿಂದುಳಿದವರ್ಗ‘ಎ’(ಮಹಿಳೆ), ಬಿ.ಕಣಬೂರು-ಸಾಮಾನ್ಯ, ಮುತ್ತಿನಕೊಪ್ಪ- ಅನುಸೂಚಿತಜಾತಿ(ಮಹಿಳೆ), ಮಂಚನಹಳ್ಳಿ-ಸಾಮಾನ್ಯ(ಮಹಿಳೆ), ಸಿಂಗಟಗೆರೆ-ಸಾಮಾನ್ಯ(ಮಹಿಳೆ), ಅಣ್ಣಿಗೆರೆ-ಅನುಸೂಚಿತಜಾತಿ(ಮಹಿಳೆ), ಹಿರೇನಲ್ಲೂರು-ಸಾಮಾನ್ಯ, ಎಮ್ಮೆದೊಡ್ಡಿ-ಸಾಮಾನ್ಯ, ಪಟ್ಟಣಗೆರೆ-ಹಿಂದುಳಿದವರ್ಗ‘ಬಿ’(ಮಹಿಳೆ), ಸಖರಾಯಪಟ್ಟಣ-ಸಾಮಾನ್ಯ, ನಿಡಘಟ್ಟ-ಸಾಮಾನ್ಯ(ಮಹಿಳೆ), ಕುಡ್ಲೂರು (ಅಮೃತಾಪುರ)-ಸಾಮಾನ್ಯ(ಮಹಿಳೆ), ಮಳಲಿಚೆನ್ನೇಹಳ್ಳಿ(ಬೇಲೇನಹಳ್ಳಿ)-ಅನುಸೂಚಿತ ಜಾತಿ(ಮಹಿಳೆ), ಲಕ್ಕವಳ್ಳಿ-ಸಾಮಾನ್ಯ, ಲಿಂಗದಹಳ್ಳಿ-ಸಾಮಾನ್ಯ(ಮಹಿಳೆ), ಬಗ್ಗವಳ್ಳಿ-ಹಿಂದುಳಿದವರ್ಗ‘ಎ’, ಶಿವನಿ-ಹಿಂದುಳಿದವರ್ಗ ‘ಎ’, ಚೌಳಹಿರಿಯೂರು- ಅನುಸೂಚಿತ ಜಾತಿ.
ಚಿಕ್ಕಮಗಳೂರು ಜಿಲ್ಲೆ ತಾಪಂ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿವರ:
ಚಿಕ್ಕಮಗಳೂರು ತಾಲೂಕು: ಆಲ್ದೂರು-ಸಾಮಾನ್ಯ(ಮಹಿಳೆ), ಮಾಚಗೊಂಡನಹಳ್ಳಿ-ಅನುಸೂಚಿತ ಪಂಗಡ(ಮಹಿಳೆ), ಅಂಬಳೆ-ಸಾಮಾನ್ಯ, ಕಳಸಾಪುರ-ಹಿಂದುಳಿದವರ್ಗ ‘ಎ’, ಬಿಂಡಿಗಾ-ಸಾಮಾನ್ಯ, ಶಿರವಾಸೆ-ಅನುಸೂಚಿತ ಜಾತಿ, ದೇವದಾನ-ಸಾಮಾನ್ಯ(ಮಹಿಳೆ), ಬ್ಯಾರವಳ್ಳಿ(ಮಲ್ಲಂದೂರು)-ಅನುಸೂಚಿತ ಜಾತಿ, ಅರಳಗುಪ್ಪೆ-ಅನುಸೂಚಿತಜಾತಿ(ಮಹಿಳೆ), ಕುರುವಂಗಿ-ಹಿಂದುಳಿದ ವರ್ಗ ‘ಎ’(ಮಹಿಳೆ), ಬಿಳೇಕಲ್ಲಳ್ಳಿ-ಸಾಮಾನ್ಯ(ಮಹಿಳೆ), ಸಿಂಧಗೆರೆ-ಸಾಮಾನ್ಯ, ಬೆಳವಾಡಿ-ಸಾಮಾನ್ಯ, ವಸ್ತಾರೆ-ಸಾಮಾನ್ಯ(ಮಹಿಳೆ), ಮೈಲಿಮನೆ-ಅನುಸೂಚಿತ ಜಾತಿ(ಮಹಿಳೆ).
ಮೂಡಿಗೆರೆ ತಾಲೂಕು: ಸಂಸೆ-ಸಾಮಾನ್ಯ, ಕಳಸ-(ಮಾವಿನಕೆರೆ)-ಸಾಮಾನ್ಯ(ಮಹಿಳೆ), ಇಡಕಣಿ-ಸಾಮಾನ್ಯ, ಕೂವೆ-ಅನುಸೂಚಿತ ಜಾತಿ(ಮಹಿಳೆ), ಬಣಕಲ್-ಅನುಸೂಚಿತ ಜಾತಿ, ದಾರದಹಳ್ಳಿ-ಹಿಂದುಳಿದವರ್ಗ ‘ಎ’(ಮಹಿಳೆ), ಜೋಗಣ್ಣಕೆರೆ-ಸಾಮಾನ್ಯ, ಬಿಳುಗುಳ(ಹೆಸಗಲ್)-ಸಾಮಾನ್ಯ, ಗೋಣಿಬೀಡು-ಅನುಸೂಚಿತಪಂಗಡ(ಮಹಿಳೆ), ಚಿನ್ನಿಗ-ಅನುಸೂಚಿತ ಜಾತಿ(ಮಹಿಳೆ).
ಕೊಪ್ಪ ತಾಲೂಕು: ಬಿಂತ್ರವಳ್ಳಿ-ಸಾಮಾನ್ಯ(ಮಹಿಳೆ), ಚಾವಲ್ಮನೆ-ಸಾಮಾನ್ಯ, ಬೈರದೇವರು-ಅನುಸೂಚಿತ ಪಂಗಡ(ಮಹಿಳೆ), ಹರಂದೂರು-ಸಾಮಾನ್ಯ(ಮಹಿಳೆ), ಹರಿಹರಪುರ- ಸಾಮಾನ್ಯ(ಮಹಿಳೆ), ಎಲೆಮಡಲು-ಅನುಸೂಚಿತಜಾತಿ(ಮಹಿಳೆ), ಹೊನ್ನಗುಂಡಿ-ಸಾಮಾನ್ಯ, ಜಯಪುರ-ಹಿಂದುಳಿದ ವರ್ಗ ‘ಎ’, ಕೊಪ್ಪ ಗ್ರಾಮಾಂತರ-ಹಿಂದುಳಿದ ವರ್ಗ ‘ಎ’ಮಹಿಳೆ, ನರಸೀಪುರ-ಅನುಸೂಚಿತಜಾತಿ, ನಿಲುವಾಗಿಲು-ಸಾಮಾನ್ಯ.
ಶೃಂಗೇರಿ ತಾಲೂಕು: ಬೆಳಂದೂ(ಅಡ್ಡಗದ್ದೆ)-ಹಿಂದುಳಿದ ವರ್ಗ ‘ಬಿ’, ಬೇಗಾರು-ಸಾಮಾನ್ಯ (ಮಹಿಳೆ), ಮೇಲುಕೊಪ್ಪ(ಧರೇಕೊಪ್ಪ)-ಸಾಮಾನ್ಯ, ಕುಂತೂರು(ಹೇರೂರು) ಸಾಮಾನ್ಯ(ಮಹಿಳೆ), ಕೆರೆ-ಅನುಸೂಚಿತಪಂಗಡ(ಮಹಿಳೆ), ವೈಕುಂಠಪುರ(ಕೂತಗೋಡು)-ಅನುಸೂಚಿತಜಾತಿ(ಮಹಿಳೆ), ಋಷ್ಯಶೃಂಗಾಪುರ(ಮರ್ಕಲ್)-ಹಿಂದುಳಿದ ವರ್ಗ ‘ಎ’(ಮಹಿಳೆ), ಮೆಣಸೆ-ಸಾಮಾನ್ಯ, ನೆಮ್ಮಾರು-ಸಾಮಾನ್ಯ, ಶೃಂಗೇರಿ(ಗ್ರಾಮಾಂತರ)-ಹಿಂದುಳಿದ ವರ್ಗ ‘ಎ’(ಮಹಿಳೆ), ವಿದ್ಯಾರಣ್ಯಪುರ(ಯಡದಳ್ಳಿ)-ಸಾಮಾನ್ಯ.
ನರಸಿಂಹರಾಜಪುರ ತಾಲೂಕು: ಬಿ.ಕಣಬೂರು-1 -ಸಾಮಾನ್ಯ, ಬಿ.ಕಣಬೂರು-2 –ಅನುಸೂಚಿತ ಜಾತಿ, ಈಚಿಕರೆ-ಸಾಮಾನ್ಯ(ಮಹಿಳೆ), ವರ್ಕಾಟ-ಸಾಮಾನ್ಯ, ಕಡಹೀನಬೈಲು-ಹಿಂದುಳಿದ ವರ್ಗ ‘ಎ’, ಕರ್ಕೇಶ್ವರ-ಅನುಸೂಚಿತ ಮಂಗಡ(ಮಹಿಳೆ), ಬನ್ನೂರು-ಅನುಸೂಚಿತಜಾತಿ(ಮಹಿಳೆ), ಆಡುವಳ್ಳಿ-ಸಾಮಾನ್ಯ, ನಾಗಲಾಪುರ-ಹಿಂದುಳಿದ ವರ್ಗ ‘ಎ’(ಮಹಿಳೆ), ಮುತ್ತಿನಕೊಪ್ಪ-ಸಾಮಾನ್ಯ(ಮಹಿಳೆ), ಸೀತೂರು-ಸಾಮಾನ್ಯ(ಮಹಿಳೆ).
ತರೀಕೆರೆ ತಾಲೂಕು: ನೇರಲಕೆರೆ(ಅಮೃತಾಪುರ)-ಸಾಮಾನ್ಯ(ಮಹಿಳೆ), ಕುಡ್ಲೂರು-ಅನುಸೂಚಿತ ಜಾತಿ, ಮಳಲಿಚೆನ್ನೇಹಳ್ಳಿ(ಬೇಲೇನಹಳ್ಳಿ)-ಅನುಸೂಚಿತಪಂಗಡ(ಮಹಿಳೆ), ಬಾವಿಕರರೆ-ಸಾಮಾನ್ಯ, ದೋರನಾಳು-ಸಾಮಾನ್ಯ, ಕರಕುಚ್ಚಿ-ಸಾಮಾನ್ಯ(ಮಹಿಳೆ), ಲಕ್ಕವಳ್ಳಿ-ಅನುಸೂಚಿತ ಜಾತಿ(ಮಹಿಳೆ), ಲಿಂಗದಹಳ್ಳಿ-ಸಾಮಾನ್ಯ, ಉಡೇವಾ-ಅನುಸೂಚಿತ ಜಾತಿ(ಮಹಿಳೆ).
ಅಜ್ಜಂಪುರ ತಾಲೂಕು: ಬಗ್ಗವಳ್ಳಿ-ಸಾಮಾನ್ಯ(ಮಹಿಳೆ), ಸೊಕ್ಕೆ-ಸಾಮಾನ್ಯ(ಮಹಿಳೆ), ಜಾವೂರು-ಸಾಮಾನ್ಯ, ತಗಡ-ಹಿಂದುಳಿದ ವರ್ಗ ‘ಎ’(ಮಹಿಳೆ), ಬುಕ್ಕಾಂಬುದಿ-ಸಾಮಾನ್ಯ, ಚೀರನಹಳ್ಳಿ-ಅನುಸೂಚಿತ ಜಾತಿ(ಮಹಿಳೆ), ಶಿವನಿ-ಹಿಂದುಳಿದ ವರ್ಗ ‘ಎ’, ಗಡಿಹಳ್ಳಿ-ಸಾಮಾನ್ಯ, ಸೊಲ್ಲಾಪುರ-ಅನುಸೂಚಿತ ಪಂಗಡ(ಮಹಿಳೆ), ಆಸಂದಿ-ಅನುಸೂಚಿತ ಜಾತಿ, ಚೌಳಹಿರಿಯೂರು-ಸಾಮಾನ್ಯ(ಮಹಿಳೆ).
ಕಡೂರು ತಾಲೂಕು: ಪಂಚನಹಳ್ಳಿ-ಹಿಂದುಳಿದ ವರ್ಗ ‘ಎ’(ಮಹಿಳೆ), ಮುತ್ತಾಣೆಗೆರೆ-ಹಿಂದುಳಿದಗರ್ವ ‘ಎ’(ಮಹಿಳೆ), ಸಿಂಗಟಗೆರೆ-ಅನುಸೂಚಿತ ಪಂಗಡ(ಮಹಿಳೆ), ಅಣ್ಣಿಗೆರೆ-ಸಾಮಾನ್ಯ, ಯಗಟಿ-ಸಾಮಾನ್ಯ(ಮಹಿಳೆ), ಗರ್ಜೆ-ಸಾಮಾನ್ಯ, ಯಳ್ಳಂಬಳಸೆ-ಸಾಮಾನ್ಯ(ಮಹಿಳೆ), ವಪ್ಪುಣಸೆ-ಸಾಮಾನ್ಯ, ಹಿರೇನಲ್ಲೂರು-ಸಾಮಾನ್ಯ(ಮಹಿಳೆ), ಮಚ್ಚೇರಿ-ಅನುಸೂಚಿತ ಜಾತಿ(ಮಹಿಳೆ), ಮತಿಘಟ್ಟ-ಅನುಸೂಚಿತ ಜಾತಿ, ಪಟ್ಟಣಗೆರೆ-ಸಾಮಾನ್ಯ(ಮಹಿಳೆ), ಎಮ್ಮೆದೊಡ್ಡಿ-ಅನುಸೂಚಿತಜಾತಿ(ಮಹಿಳೆ), ಚಿಕ್ಕಂಗಳ-ಅನುಸೂಚಿತ ಜಾತಿ, ಸಖರಾಯಪಟ್ಟಣ-ಸಾಮಾನ್ಯ, ಹುಲಿಕೆರೆ-ಹಿಂದುಳಿದ ವರ್ಗ ‘ಬಿ’, ನಿಡಘಟ್ಟ-ಹಿಂದುಳಿದ ವರ್ಗ ‘ಎ’, ದೇವನೂರು-ಸಾಮಾನ್ಯ.
ಆಕ್ಷೇಪಣೆ ಸಲ್ಲಿಸುವವರು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ 1ನೇ ಮಹಡಿ, ಕೆಎಸ್‍ಸಿಎಂಎಫ್ ಕಟ್ಟಡ (ಹಿಂಭಾಗ) ನಂ.8. ಕನ್ನಿಂಗ್ ಹ್ಯಾಂ ರಸ್ತೆ ಬೆಂಗಳೂರು-560 052 ಇಲ್ಲಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.





