ಬೆಂಗಳೂರು: ಮನೆಕಳ್ಳತನ ಪ್ರಕರಣ; ಬಂಧನ

ಬೆಂಗಳೂರು, ಜು.2: ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪದಡಿ ಓರ್ವನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಡಂಕಣಿಕೋಟೆಯ ಮುರುಗನ್(24) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಜೂ.16ರಂದು ಮನೆಗೆ ಬೀಗ ಹಾಕಿ ಮೈಸೂರಿಗೆ ಹೋಗಿದ್ದ ಮಾಲಕರೊಬ್ಬರ ಮನೆಯ ಮೇಲಿನ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗಿದ ಬಂಧಿತ ಆರೋಪಿಯು ಬೆಳ್ಳಿಯ ಸಾಮಾನುಗಳು ಹಾಗೂ ಹಿತ್ತಾಳೆಯ ದೀಪದ ಕಂಬಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ದಾಖಲಾದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 2,50 ಲಕ್ಷ ರೂ ಮೌಲ್ಯದ 4 ಕೆಜಿ 385 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಸುಮಾರು 5 ಕೆಜಿ ಹಿತ್ತಾಳೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
Next Story





