ಹೃದಯಾಘಾತದಿಂದ ನಿಧನ: ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯ ಸಂಸ್ಕಾರ

ಗುಂಡ್ಲುಪೇಟೆ, ಜು3: ಹೃದಯಾಘಾತದಿಂದ ನಿಧನರಾದ ಯೋಧ ಶಿವಕುಮಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ತಾಲೂಕಿನ ಅಣ್ಣೂರು ಕೇರಿ ಗ್ರಾಮದಲ್ಲಿ ನೆರವೇರಿತು.
ತ್ರಿವರ್ಣ ಧ್ವಜ ಸುತ್ತಿದ ಶವ ಪೆಟ್ಟಿಗೆಯನ್ನು ಸೇನಾ ಸಿಬ್ಬಂದಿ ವಾಹನದಿಂದ ಹೊರಗೆ ತರುತ್ತಿದ್ದಂತೆ ರಾಷ್ಟ್ರ ಧ್ವಜ ಹಿಡಿದು ನಿಂತಿದ್ದ ಜನರು "ಶಿವಕುಮಾರ್ ಅಮರ್ ಹೈ" ಎಂಬ ಘೋಷಣೆಗಳೊಂದಿಗೆ ಗೌರವ ನಮನ ಸಲ್ಲಿಸಿದರು.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಶನಿವಾರ ತಡರಾತ್ರಿ ಪ್ರಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿತ್ತು ಅಲ್ಲಿಂದ ಶನಿವಾರ ರಸ್ತೆ ಮಾರ್ಗವಾಗಿ ಗುಂಡ್ಲುಪೇಟೆಗೆ ತರಲಾಯಿತು. ಗ್ರಾಮಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಅಪಾರ ಬಂಧು ಬಳಗದ ಸದಸ್ಯರು, ಊರಿನವರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಯೋಧನ ದರ್ಶನ ಪಡೆದರು.
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ದಿವ್ಯಾಸಾರಾ ಥಾಮಸ್ ಗೌರವ ವಂದನೆ ಸಲ್ಲಿಸಿದ್ದರು ಮನೆಯ ಮುಂದೆ ಕುಟುಂಬಸ್ಥರ ದರ್ಶನಕ್ಕೆಂದು ಕೆಲ ಹೊತ್ತು ಪಾರ್ಥಿವ ಶರೀರ ಇಡಲಾಯಿತು ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಅಗಲಿದ ಯೋಧನಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ರವಿಶಂಕರ್, ತಾಲೂಕು ಪಂಚಾಯತಿ ಇ.ಓ. ಶ್ರೀಕಂಠರಾಜ್ ಅರಸ್ ಡಿ.ವೈ.ಎಸ್.ಪಿ. ಪ್ರಿಯದರ್ಶಿನಿ ಸಾಣೆಕೊಪ್ಪ, ಸರ್ಕಲ್ ಇನ್ ಪೆಕ್ಟರ್ ಮಹದೇವ ಸ್ವಾಮಿ ಪಿ.ಎಸ್.ಐ.ರಾಜೇಂದ್ರ ಹಾಗೂ ಸಾವಿರಾರು ಜನರನ್ನು ಭಾಗವಹಿಸಿದ್ದರು









