ಮಡಿಕೇರಿ: ಮನೆಯಂಗಳದಲ್ಲಿ ಕಾಡಾನೆಗಳ ಸವಾರಿ!

ಮಡಿಕೇರಿ ಜು.3 : ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ.
ಸುಮಾರು 6 ಕಾಡಾನೆಗಳ ಹಿಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಪುಚ್ಚಿಮಾಡ ವಸಂತ ಎಂಬುವವರ ಮನೆಯಂಗಳದಲ್ಲಿ ಇಂದು ಬೆಳಗ್ಗೆ ಪ್ರತ್ಯಕ್ಷವಾಗಿದೆ.
ಸುತ್ತಮುತ್ತಲ ಕಾಫಿ ಮತ್ತು ಬಾಳೆತೋಟಗಳಿಗೆ ಹಾನಿ ಮಾಡಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡಿನಿಂದ ಯಾವುದೇ ಕೆಲಸ, ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲವೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
Next Story





