ತೆಕ್ಕಟ್ಟೆಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ

ಕೋಟ ಜು.3: ಬಿಜೆಪಿ ಕುಂದಾಪುರ ಮಂಡಲ ಹಾಗೂ ಯುವ ಮೋರ್ಚಾ ಕುಂದಾಪುರ ಮತ್ತು ಶಕ್ತಿ ಕೇಂದ್ರ ತೆಕ್ಕಟ್ಟೆ ಇದರ ವತಿ ಯಿಂದ ಡಾ.ಶ್ಯಾಮ ಪ್ರಸಾದ್ ಮುಖರ್ಜಿರವರ ಜನ್ಮ ದಿನೋತ್ಸವದ ಅಂಗವಾಗಿ ಸೇವಾ ಹಿ ಸಂಘಟನ್ ಕಾರ್ಯಕ್ರಮದ ಅಡಿ ಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ತೆಕ್ಕಟ್ಟೆ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಹಾಗೂ ಕೋಟೇಶ್ವರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಕೋಟೇಶ್ವರ ಪಬ್ಲಿಕ್ ಶಾಲೆಯಲ್ಲಿ ಸಸಿಗಳನ್ನು ನೆಡುವ ವೃಕ್ಷಾರೋಪಣ ಕಾರ್ಯ ಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಬಿಜೆಪಿ ಕುಂದಾಪುರ ಮಂಡಲ ವಲಯದ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದಾನಂದ ಬಳ್ಕೂರು, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ , ಯುವಮೋರ್ಚಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್‌ರಾಜ್ ಶಾಂತಿನಿಕೇತನ, ಶರತ್ ಶೆಟ್ಟಿ ಉಪ್ಪುಂದ, ಯುವಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು, ಕೊಟೇಶ್ವರ ಮಹಾಶಕ್ತಿಕೇಂದ್ರ ಅಧ್ಯಕ್ಷ ಕೃಷ್ಟ ಗೊಲ್ಲ, ತೆಕ್ಕಟ್ಟೆ ಶಕ್ತಿ ಕೇಂದ್ರ ಅಧ್ಯಕ್ಷ ಕಿರಣ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುಧಿಂದ್ರ ಗಾಣಿಗ, ಗ್ರಾಪಂ ಸದಸ್ಯರಾದ ವಿನೋದ್ ತೆಕ್ಕಟ್ಟೆ, ಪ್ರತಿಮಾ, ಕಮಲ, ಆನಂದ್ ಕಾಂಚನ್ ಕೊಮೆ, ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರ ಸುನಿಲ್ ಖಾರ್ವಿ, ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಕುಂದಾಪುರ, ಸಂತೋಷ್ ಪೂಜಾರಿ ತೆಕ್ಕಟ್ಟೆ, ಕೋಟೇಶ್ವರ ಯುವಮೋರ್ಚಾ ಮಹಾಶಕ್ತಿಕೇಂದ್ರ ಅಧ್ಯಕ್ಷ ವಿವೇಕ್ ದೇವಾಡಿಗ, ರಾಮಚಂದ್ರ ತೆಕ್ಕಟ್ಟೆ, ಸುರೇಶ್ ಆಚಾರ್ಯ ತೆಕ್ಕಟ್ಟೆ, ಪುರಂದರ ತೆಕ್ಕಟ್ಟೆ, ವಿನೊದ್ ಕೊಮೆ, ರಾಜು ಕೊಮೆ, ಪ್ರಶಾಂತ್ ದೇವಾಡಿಗ ತೆಕ್ಕಟ್ಟೆ, ಸೂರಿ ಶೆಟ್ಟಿ ತೆಕ್ಕಟ್ಟೆ ಉಪಸ್ಥಿತರಿದ್ದರು.





