ಲಸಿಕೆ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಪಿಎಂ ಕೇರ್ಸ್ ನಿಧಿ ಬಳಕೆ : ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ

ಹೊಸದಿಲ್ಲಿ, ಜು.21: ಹೈದರಾಬಾದ್ನಲ್ಲಿ ಲಸಿಕೆ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲು ಪಿಎಂ ಕೇರ್ಸ್ ನಿಧಿಯಿಂದ ಹಣವನ್ನು ಮಂಜೂರು ಮಾಡಲಾಗಿದೆಯೆಂದು ಕೇಂದ್ರ ಸಹಾಯಕ ಗೃಹ ಸಚಿವ ಜಿ.ಕಿಶನ್ ರೆಡ್ಡಿ ಶನಿವಾರ ತಿಳಿಸಿದ್ದಾರೆ.
‘‘ಹೈದರಾಬಾದ್ನಲ್ಲಿ ಲಸಿಕೆ ಪರೀಕ್ಷಾ ಪ್ರಯೋಗಾಲಯದ ಸ್ಥಾಪನೆಗೆ ಹಣಕಾಸು ನಿಧಿಯನ್ನು ಮಂಜೂರು ಗೊಳಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ಹೈದರಾಬಾದ್ನಲ್ಲಿ ಫಾರ್ಮಾ ವಲಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ ಕೋವಿಡ್ 19 ಲಸಿಕೆಗಳ ಉತ್ಪಾದನೆಯನ್ನು ಇದು ಉತ್ತೇಜಿಸಲಿದೆ ಎಂದು ಸಿಕಂದರಬಾದ್ನ ಲೋಕಸಭಾ ಸದಸ್ಯರೂ ಆಗಿರುವ ಕಿಶನ್ ರೆಡ್ಡಿ ಟ್ವೀಟಿಸಿದ್ದಾರೆ.
ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸಲು ಲಸಿಕೆ ಉತ್ಪಾದನೆಯನ್ನು ಚುರುಕು ಗೊಳಿಸಲು, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪರೀಕ್ಷಾ ಪ್ರಯೋಗಾಲಯಗಳ ಅಗತ್ಯವಿದೆಯೆಂದು ಎಂದು ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೈದರಾಬಾದ್ನ ನೂತನ ಲಸಿಕಾ ಪ್ರಯೋಗಾಲಯವು ಮುಂದಿನ ಒಂದು ತಿಂಗಳೊಳಗೆ ಕಾರ್ಯಾರಂಭಿಸಲಿದೆ ಯೆಂದವರು ಹೇಳಿದ್ದಾರೆ.
ಪ್ರಸಕ್ತ ದೇಶದಲ್ಲಿ ಎರಡು ಲಸಿಕೆ ಪರೀಕ್ಷಾ ಪ್ರಯೋಗಾಲಯಗಳಿವೆ. ಕಸೌಲಿಯ ಸೆಂಟ್ರಲ್ ಡ್ರಗ್ ಲ್ಯಾಬೊರೇಟರಿ ಹಾಗೂ ನೊಯ್ಡಾದ ನ್ಯಾಶನಲ್ ಇನ್ಸಿ ಟಿಟ್ಯೂಟ್ ಆಫ್ ಬಯಾಲಜಿಕಲ್ಸ್ ಆ ಎರಡು ಪ್ರಯೋಗಾಲಯಗಳು ಎಂದವರು ಹೇಳಿದರು.
ಪುಣೆಯಲ್ಲಿ ಜೀವಕೋಶ ವಿಜ್ಞಾನಕ್ಕಾಗಿನ ರಾಷ್ಟ್ರೀಯ ಕೇಂದ್ರ ಪ್ರೋಯಾಗಲಯ ಹಾಗೂ ಪ್ರಾಣಿಗಳ ಜೈವಿಕ ತಂತ್ರಜ್ಞಾನ ಪ್ರಯೋಗಾಲಗಳ ಸ್ಥಾಪನೆಗೂ ಪಿಎಂ ಕೇರ್ಸ್ ಫಂಡ್ನಿಂದ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದವರು ತಿಳಿಸಿದರು.







